ಅಪ್ಪು ಅಗಲಿ 4 ತಿಂಗಳು ಕಳೆದಿವೆ .ಆದರೂ ನಿತ್ಯ ಒಂದಲ್ಲಾ ಒಂದು ರೀತಿ ಅಪ್ಪು ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ನೆನಪು ಮಾಡಿಕೊಳ್ತೀದ್ದಾರೆ. ಇತ್ತೀಚೆಗೆ ಬಹುತೇಕ ಜಾತ್ರೆ, ಮುಸ್ಲಿಂ ಕಾರ್ಯಕ್ರಮಗಳಲ್ಲೂ ಅಪ್ಪು ಭಾವಚಿತ್ರ ರಾರಾಜಿಸುತ್ತಿದೆ. ಇದ್ರ ಮದ್ಯೆ ನಿನ್ನೆ ನಡೆದ ಕನಕಗಿರಿ ಜಾತ್ರೆಯಲ್ಲಿ ಅಭಿಮಾನಿಯೊಬ್ಬ ಅಪ್ಪು ಫೋಟೋ ಹಿಡಿದು ಕಣ್ಣೀರು ಹಾಕಿದ್ದಾನೆ.
ಇದನ್ನು ಓದಿ :-ಊರ ಜಾತ್ರೆಯಲ್ಲಿ ಸಿದ್ದರಾಮಯ್ಯ ಸಖತ್ ಸ್ಟೆಪ್ ..!
ಕೊಪ್ಪಳ ಜಿಲ್ಲೆಯ ಕನಕಗಿರಿಯ ಕನಕಾಚಲಪತಿ ರಥೋತ್ಸವ ನಡೆಯಿತು. ರಥೋತ್ಸವದ ವೇಳೆ ಅಭಿಮಾನಿಯೋರ್ವ ಅಪ್ಪು ಭಾವಚಿತ್ರ ಹಿಡಿದು ಕಣ್ಣೀರು ಹಾಕೋ ವಿಡಿಯೋ ಸಖತ್ ವೈರಲ್ ಆಗ್ತಿದೆ. ಬಿಕ್ಕಿ ಅಳುತ್ತಿರೋ ಅಪ್ಪು ಅಭಿಮಾನಿಯನ್ನ ಸಮಾಧಾನ ಮಾಡಿದ ಯುವಕರು ಅಪ್ಪು ಭಾವಚಿತ್ರಕ್ಕೆ ಕೈ ಮುಗಿದಿದ್ದಾರೆ. ಜಾತ್ರೆಯ ರಥ ಬೀದಿಯಲ್ಲಿ ಅಪ್ಪು ಅಭಿಮಾನಿಗಳು ಫೋಟೋ ಹಿಡಿದು ಕಣ್ಣೀರು ಹಾಕಿದ್ದಾರೆ.
ಇದನ್ನು ಓದಿ :- ರಾಜ್ಯದಲ್ಲಿ ಮಧ್ಯರಾತ್ರಿಯಿಂದಲೇ ಅಬ್ಬರಿಸಿದ ‘RRR’- ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ