ಗಾಂಜಾ ಮಾರಾಟ ಮಾಡ್ತಿದ್ದ ಐವರು ಆರೋಪಿಗಳನ್ನು ಕೋರಮಂಗಲ ಪೋಲೀಸರು ಬಂಧಿಸಿದ್ದಾರೆ. ಚಾಮರಾಜನಗರದಿಂದ ಗಾಂಜಾ ತಂದು ಕೋರಮಂಗಲದಲ್ಲಿ ಮಾರಾಟಕ್ಕೆ ಯತ್ನಿಸ್ತಿದ್ದ ಆರೋಪಿಗಳು.
ಬಂಧಿತರಿಂದ 40 ಲಕ್ಷ ಮೌಲ್ಯದ 102 ಕೆ.ಜಿ 200ಗ್ರಾಂ ಗಾಂಜಾ ಮತ್ತು ಬೈಕ್ ಜಪ್ತಿ ಮಾಡಲಾಗಿದೆ. ಈಗಾಗಲೇ ಬಂಧಿತರ ವಿರುದ್ಧ ಕೋರಮಂಗಲ, ಹೆಚ್.ಎಸ್.ಆರ್ ಲೇಔಟ್, ಬೇಗೂರು, ಕೋಣನಕುಂಟೆ, ಕೆಆರ್ ಪುರಂ ಠಾಣೆಗಳಲ್ಲಿ ಗಾಂಜಾ, ಕೊಲೆ, ಸರಗಳ್ಳತನ ಪ್ರಕರಣಗಳು ದಾಖಲಾಗಿವೆ.
ಇದನ್ನು ಓದಿ :- ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡ್ತಿದ್ದ ಆರೋಪಿಯ ಬಂಧನ