ಚಿಕ್ಕೋಡಿಯಲ್ಲಿ ಎಸ್ ಎಸ್ ಎಲ್ ಸಿ (SSLC)ಅಭ್ಯರ್ಥಿ ಪರವಾಗಿ ಪರೀಕ್ಷೆಗೆ ಹಾಜರಾಗಿದ್ದ 6 ಜನರನ್ನ ವಶಕ್ಕೆ ಪಡೆಯಲಾಗಿದೆ. ಐವರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದವರನ್ನು ರಾಹುಲ್ ಕಿಳ್ಳಿಕೇತರ ಸಾಕಿನ್ ಗೊಡಗೇರಿ, ಭಿಮಶಿ ಹುಲಿಕುಂದ, ಕಾರ್ತಿಕ್ ಲಚ್ಚಪ್ಪ ಜಿಕುಂಬಾರ್ ಸಿದ್ದು ಮಾದೇವ್ ಜೋಗಿ , ಮಾಂತೇಶ್ ಸಂಗಪ್ಪ , ಸವೀತಾ ಮಾದೇವ ಎಂದು ಗುರುತಿಸಲಾಗಿದೆ.
ಈ ವಿದ್ಯಾರ್ಥಿಗಳು ಬೇರೆಯವರ ಬದಲಾಗಿ ಪರೀಕ್ಷೆ ಬರೆಯಲು ಬಂದಾಗ ಶಿಕ್ಷಣ ಇಲಾಖೆ ಅಧಿಕಾರಿಗಳು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ ಕಾಲೇಜಿನ ಪರೀಕ್ಷೆ ಹಾಜರಾಗಿದ್ದ ವಿದ್ಯಾರ್ಥಿಗಳ ಹಾಲ್ ಟಿಕೇಟ್ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ :- ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಇಂದು ಎಂ.ಬಿ.ಪಾಟೀಲ್ ಪದಗ್ರಹಣ