ಸ್ಮಾರ್ಟ್ ಸಿಟಿ ಕುಂದಾನಗರಿ ಬೆಳಗಾವಿಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಬೇಸಿಗೆ ಕಾರಣ ಡ್ಯಾಂಗಳಲ್ಲಿ ನೀರು ಕಡಿಮೆಯಾಗಿ ಈ ಪರಿಸ್ಥಿತಿ ನಿರ್ಮಾಣ ಆಗಿಲ್ಲ. ಬದಲಿಗೆ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಜನ ನೀರಿಗಾಗಿ ಪರದಾಟ ನಡೆಸುವಂತಾಗಿದೆ.
ಅನೇಕ ಬಡಾವಣೆಯಲ್ಲಿ 10 ರಿಂದ 12 ದಿನಕ್ಕೆ ಒಮ್ಮೆ ನೀರು ಪೂರೈಕೆಯಾಗುತ್ತಿದೆ. ರಾಕಸಕೊಪ್ಪ, ಹಿಡಕಲ್ ಜಲಾಶಯದಲ್ಲಿ ಸಾಕಷ್ಟು ನೀರು ಇದೆ. ಆದ್ರೂ ನೀರು ಪೂರೈಕೆಯಲ್ಲಿ ಎಲ್ & ಟಿ ಕಂಪನಿ ವ್ಯತ್ಯಯ ಮಾಡುತ್ತಿದೆ. ನಗರದಲ್ಲಿ ನೀರು ಪೂರೈಕೆಗೆ ಈ ಕಂಪನಿ ಗುತ್ತಿಗೆ ಪಡೆದಿದೆ. ಇದೀಗ ಎಲ್ & ಟಿ ಕಂಪನಿಯ ಸಿಬ್ಬಂದಿಗೆ ಶಾಸಕ ಅನಿಲ್ ಬೆನಕೆ ವಾರ್ನಿಂಗ್ ಕೊಟ್ಟಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪಾಲಿಕೆಯಲ್ಲಿ ಸಭೆ ನಡೆಯಿತು. ನಿಮ್ಮ ತಪ್ಪು ಮುಚ್ಚಿಕೊಳ್ಳಲು ಕಾರಣ ಹೇಳಬೇಡಿ ಎಂದು ಕಿಡಿಕಾರಿದ್ದಾರೆ ನಗರದ ಅನೇಕ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ನೀರು ಸಾಕಾಗುತ್ತಿಲ್ಲ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.
ಇದನ್ನು ಓದಿ :- ಸವದತ್ತಿ ಯಲ್ಲಮ್ಮ ದೇವಾಲಯದ ಹುಂಡಿಯಲ್ಲಿ ನಗದು ಜೊತೆಗೆ ಸಿಕ್ಕಿದ್ದು ಏನು ಗೊತ್ತಾ..?