ಬೇಸಿಗೆಯಲ್ಲಿ ಅರಳುವ ಹೂವು ಶಂಖಪುಷ್ಪ. ಇದನ್ನು ಗಿಡಮೂಲಿಕೆ ಔಷಧಿಯ ಭಾಗವೆಂದು ಪರಿಗಣಿಸಲಾಗಿದೆ. ಶಂಖಾಕಾರದ ಹೂವು, ಏಷ್ಯನ್ ಪಾರಿವಾಳ ರೆಕ್ಕೆಗಳು, ಶಂಖಿನಿ, ಕಂಬುಮಾಲಿನಿ, ಸದಾಫುಲಿ ಮತ್ತು ಸಂಖಾಫುಲಿ ಎಂದೂ ಕರೆಯಲ್ಪಡುತ್ತದೆ, ಇದನ್ನು ಮೆಮೊರಿ ಬೂಸ್ಟರ್ ಮತ್ತು ಮೆದುಳಿನ ಟಾನಿಕ್ ಆಗಿ ಜನಪ್ರಿಯವಾಗಿ ಬಳಸಲಾಗುತ್ತದೆ. ಶಂಖಪುಷ್ಪ ಸಿರಪ್ ಮಕ್ಕಳ ಮೆದುಳಿನ ಬೆಳವಣಿಗೆಗೆ ತುಂಬಾ ಒಳ್ಳೆಯದು. ಮಕ್ಕಳು ಇದನ್ನು ಮೂರು ತಿಂಗಳ ಕಾಲ ನಿಯಮಿತವಾಗಿ ಸೇವಿಸಿದರೆ ಪರಿಣಾಮಕಾರಿ ಎನ್ನಲಾಗುತ್ತದೆ.
ಇದು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಮೆಮೊರಿ ಮತ್ತು ಏಕಾಗ್ರತೆ ಹೆಚ್ಚಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಇತರ ಗಿಡಮೂಲಿಕೆಗಳೊಂದಿಗೆ ಇದನ್ನು ಬೆರೆಸಿದಾಗ ಸ್ಕಿಜೋಫ್ರೇನಿಯಾ, ಖಿನ್ನತೆ, ಅಪಸ್ಮಾರ ಮತ್ತು ಆಕ್ರಮಣಕಾರಿ ನಡವಳಿಕೆಯ ಅಸ್ವಸ್ಥತೆಗಳಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಹಕಾರಿ ಎನ್ನಲಾಗುತ್ತದೆ. ಶಂಖಪುಷ್ಪವನ್ನು ಸಾಮಾನ್ಯವಾಗಿ ಪೇಸ್ಟ್, ಪೌಡರ್ ಮತ್ತು ಟಾನಿಕ್ ಆಗಿ ವಿವಿಧ ವಸ್ತುಗಳಲ್ಲಿ ಬಳಸಲಾಗುತ್ತದೆ. ಇವುಗಳಲ್ಲಿ ಬಳಸಲಾಗುವ ಭಾಗಗಳೆಂದರೆ ಎಲೆಗಳು, ಹೂವುಗಳು, ಕಾಂಡ, ಬೇರುಗಳು, ಬೀಜಗಳು. ಇದನ್ನ ಕೆಲವರು ಟೀಯಾಗಿಯೂ ಬಳಸುತ್ತಾರೆ.
ಶಂಖ ಪುಷ್ಪ ಹೂವು, ಎಲೆ ಮತ್ತು ಬೇರುಗಳಿಂದ ಮಾಡಿದ ಪುಡಿಯನ್ನು ಸೇವಿಸಿದರೆ ಬುದ್ದಿಶಕ್ತಿಯನ್ನು ಹೆಚ್ಚಿಸಬಹುದು. ಇದು ವೃಧ್ದಾಪ್ಯದ ಮರೆವಿನ ಕಾಯಿಲೆಯಿಂದ ಪರಿಹಾರ ನೀಡುತ್ತದೆ. ಇದು ಮೆಮೊರಿ ಮತ್ತು ಏಕಾಗ್ರತೆಯನ್ನು ಉತ್ತೇಜಿಸುವ ಮೂಲಕ ನರಗಳ ಕಾರ್ಯವನ್ನು ಸರಾಗಗೊಳಿಸುತ್ತದೆ. ಅಲ್ಲದೇ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮನಸ್ಸನ್ನು ಶಾಂತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಮೆದುಳಿನಲ್ಲಿ ರಕ್ತದ ಹರಿವನ್ನು ಸರಾಗಗೊಳಿಸಲು ಸಹಕಾರಿ ಹಾಗೂ ಇದು ಆಯಾಸ, ನರಗಳ ದುರ್ಬಲತೆ ಮತ್ತು ಕಡಿಮೆ ಶಕ್ತಿಯ ಮಟ್ಟವನ್ನು ಹೆಚ್ಚು ಮಾಡುತ್ತದೆ.
ಇದನ್ನು ಓದಿ :- ಬೇಸಿಗೆ ದಾಹಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್ – ನಿರ್ಲಕ್ಷ್ಯಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ…