ನಾನು ಸಚಿವ ಸ್ಥಾನದ ಲಾಬಿಗಾಗಿ ಅಮಿತ ಶಾ ಅವರನ್ನ ಭೇಟಿ ಮಾಡಿಲ್ಲ. ನಾನು 6 ತಿಂಗಳ ಹಿಂದೆಯೇ ಅವರಿಗೆ ಭೇಟಿ ಮಾಡಲು ಕೇಳಿದ್ದೆ ಎಂದು ಹುಬ್ಬಳ್ಳಿ ಧಾರವಾಡ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು ಸಚಿವ ಸ್ಥಾನದ ಲಾಬಿಗಾಗಿ ನಾನು ಭೇಟಿ ಕೇಳಿಲ್ಲ. ಅಮಿತ್ ಶಾ ಅವರು ನನ್ನನ್ನು ಕರೆದಿದ್ದರು. ರಾಜ್ಯ ಪ್ರವಾಸದ ಮುನ್ನ ಅವರು ಬಂದು ಭೇಟಿ ಮಾಡಲು ಹೇಳಿದ್ರು.
ಅದಕ್ಕಾಗಿ ನಾನು ಭೇಟಿ ಮಾಡಿ ಬಂದಿದ್ದೇನೆ. ರಾಜ್ಯದ ಸ್ಥಿತಿ ಗತಿ ಬಗ್ಗೆ ಚರ್ಚೆ ಮಾಡಿದ್ರು. ಉತ್ತರ ಕರ್ನಾಟಕ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತುಕತೆ ಆಗಿದೆ. ನಾನಂತು ಅವರಿಗೆ ಏನು ಕೇಳೊಕೆ ಹೋಗಿಲ್ಲ. ನಾನು ಡಿಸಿಎಂ ಸ್ಥಾನದ ರೇಸ್ ನಲ್ಲಿ ಇರುವುದು ಮಾದ್ಯಮದವರಿಗೇನೇ ಗೊತ್ತು ಎಂದು ತಿಳಿಸಿದ್ರು.
ಇದನ್ನು ಓದಿ :- ಶಾರುಖ್ ಪುತ್ರನ ಡ್ರಗ್ಸ್ ಪತ್ತೆ ಪ್ರಕರಣ – ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ನಿಧನ