ಹಣ್ಣುಗಳ (fruits) ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಸೇವನೆ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ.
ಹಣ್ಣುಗಳನ್ನು ತಿನ್ನುವುದರಿಂದ ಹೀಟ್ ಸ್ಟ್ರೋಕ್, ಅಧಿಕ ಬಿಪಿ, ( BP) ಕ್ಯಾನ್ಸರ್ (Cancer), ಮಧುಮೇಹ (Diabitic)ದಂತಹ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಣ್ಣಿನಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಹಣ್ಣುಗಳ ಆರೋಗ್ಯಕಾರಿ ಪ್ರಯೋಜನಗಳು ನಮಗೆಲ್ಲರಿಗೂ ತಿಳಿದಿವೆ. ಆದರೆ ಜನರ ಮನಸ್ಸಿನಲ್ಲಿ ಅವುಗಳನ್ನು ಯಾವಾಗ ತಿನ್ನಬೇಕು ಎಂಬ ಗೊಂದಲವಿದೆ. ಹಣ್ಣುಗಳನ್ನು ತಿನ್ನುವುದು ಒಳ್ಳೆಯದೋ ಅಥವಾ ಕೆಟ್ಟದೋ ಎಂದು ಅನೇಕರು ಪ್ರಶ್ನಿಸುತ್ತಾರೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿನ್ನುವುದು ಉತ್ತಮ ಎಂದು ಕೆಲವರು ಹೇಳುತ್ತಾರೆ. ಆದರೆ ಇನ್ನೂ ಕೆಲವರು ಊಟದ ನಂತರ ಹಣ್ಣುಗಳನ್ನು ತಿನ್ನಬೇಕು ಎಂದು ಹೇಳುತ್ತಾರೆ.
ತಜ್ಞರ ಪ್ರಕಾರ ಊಟವೂ ಹಣ್ಣಿನಿಂದ ಪ್ರಾರಂಭವಾಗಬೇಕು. ಬೆಳಗಿನ ಉಪಾಹಾರವು ಬಹಳ ಮುಖ್ಯವಾದ ಊಟವಾಗಿದೆ. ಇದರಿಂದ ನಮ್ಮ ದೇಹಕ್ಕೆ ಬೇಕಾಗುವ ಹೆಚ್ಚಿನ ಪೋಷಕಾಂಶಗಳು ಬೆಳಗಿನ ಜಾವದಲ್ಲಿ ದೊರೆಯುತ್ತವೆ. ಇದು ದೇಹವನ್ನು ಉತ್ಸುಕಗೊಳಿಸುತ್ತದೆ. ಆಯಾಸ ಕಡಿಮೆಯಾಗುತ್ತದೆ. ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ. ಪರಿಣಾಮವಾಗಿ, ಬೆಳಗಿನ ನಿದ್ದೆ ಕೂಡ ಕಳೆದುಹೋಗುತ್ತದೆ.
ಬೆಳಗಿನ ಉಪಹಾರ ಮತ್ತು ಊಟದ ನಡುವೆ ಹಣ್ಣುಗಳನ್ನು ಸಹ ತಿನ್ನಬಹುದು. ಈ ಸಮಯದಲ್ಲಿ ಸಿಟ್ರಸ್ ಹಣ್ಣುಗಳನ್ನು ತಿನ್ನುವುದು ಉತ್ತಮ. ಅಂದರೆ ಕಿತ್ತಳೆ, , ಕಿವಿ ಹಣ್ಣು, ಅನಾನಸ್ ಮುಂತಾದ ಹಣ್ಣುಗಳನ್ನು ತೆಗೆದುಕೊಳ್ಳಬೇಕು. ಊಟದ ನಂತರ ನೀವು ಮಾವಿನ ಹಣ್ಣುಗಳು, ಕರಬೂಜ ಹಣ್ಣನ್ನು ತಿನ್ನಬಹುದುದಾಗಿದೆ.
ಇದನ್ನು ಓದಿ :- ಬೇಸಿಗೆ ದಾಹಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್ – ನಿರ್ಲಕ್ಷ್ಯಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ…