ಅವರವರು ಅವರ ಪದ್ಧತಿ ಮುಂದುವರಿಸಿಕೊಂಡು ಹೋಗಲಿ. ಮುಸಲ್ಮಾನರು ಹಲಾಲ್ ಕಟ್ ಮಾಡುವುದಾದರೆ ಮಾಡಲಿ. ಹಿಂದೂಗಳು ಜಟ್ಕಾ ಕಟ್ ಮಾಂಸ ಮಾಡುವುದಾದ್ರೆ ಮಾಡಲಿ.
ಮುಸಲ್ಮಾನರು ನಮ್ಮ ಮನೆಗೆ ಬಂದು ಒತ್ತಡ ಹಾಕುವುದಿಲ್ಲ. ನಾನು ಮುಸಲ್ಮಾನರ ಮನೆಗೆ ಹೋಗಿ ಒತ್ತಡ ಹಾಕುವುದಿಲ್ಲ. ಸಮಾಜವನ್ನ ಒಡೆಯುವ ದಿಕ್ಕಿನಲ್ಲಿ ಕುತಂತ್ರ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ನಾನು ರಾಜಕಾರಣ ಮಾಡಲು ಇಷ್ಟಪಡುವುದಿಲ್ಲ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಹಿಜಾಬ್ ವಿವಾದವನ್ನು ಆರಂಭ ಮಾಡಿದ್ದು ಯಾರು? ಹರ್ಷ ಕೊಲೆಯನ್ನ ಕಾಂಗ್ರೆಸ್ ಯಾಕೆ ಖಂಡಿಸಲಿಲ್ಲ? ಹಿಜಾಬ್, ಹಲಾಲ್, ರಾಷ್ಟ್ರಧ್ವಜದ ಕುರಿತು ಚರ್ಚಿಸ್ತಿದೆ. ಮುಸಲ್ಮಾನರನ್ನು ತೃಪ್ತಿ ಪಡಿಸುವ ಯತ್ನ ಒಳ್ಳೆಯದಲ್ಲ.
‘ಇಲ್ಲಿ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಅಂತಾರೆ’. ಪಾಕಿಸ್ತಾನದಿಂದ ಜಿಂದಾಬಾದ್ ಅನ್ನುವವರನ್ನ ಬಿಡಲ್ಲ. NIA ತನಿಖೆಯಿಂದ ಹರ್ಷ ಕೊಲೆಗೆ ನ್ಯಾಯ ಸಿಗುತ್ತೆ. ಹಿಂದೆಯಿಂದ ಕೊಚ್ಚಿದವರನ್ನ ಗಂಡಸರೆನ್ನಲು ಸಾಧ್ಯವೇ? ಚುನಾವಣೆ ಬಂದಾಗ ನಾವು ಉತ್ತರ ಕೊಡುತ್ತೇವೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : – ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಡಿಕೆಶಿ