ಜಟ್ಕಾ ಕಟ್ ಅಭಿಯಾನ ಯಶಸ್ವಿಯಾಗಿರುವ ಹಿನ್ನೆಲೆ ಇದೀಗ ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಸಜ್ಜಾಗಿವೆ. ಹಿಂದೂಪರ ಸಂಘಟನೆಗಳು ಯುಗಾದಿ ಹೊಸತೊಡಕು ವೇಳೆ ಹಲಾಲ್ ಕಟ್ ಮಾಂಸವನ್ನು ಬಿಟ್ಟು, ಹಿಂದೂಗಳು ಜಟ್ಕಾ ಕಟ್ ಮಾಂಸವನ್ನು ಖರೀದಿಸಿ ಸೇವಿಸಬೇಕು ಎಂದು ಅಭಿಯಾನ ನಡೆಸಿದ್ದರು. ಅದರಂತೆ ಬುಧವಾರ ಹಲಾಲ್ ಕಟ್ ಮಾಂಸಕ್ಕಿಂತಲೂ ಜಟ್ಕಾ ಕಟ್ ಮಾಂಸವನ್ನು ಜನ ಹೆಚ್ಚಾಗಿ ಖರೀದಿಸಿದ್ದು, ಜಟ್ಕಾ ಕಟ್ ಅಭಿಯಾನ ಯಶಸ್ವಿಯಾಗಿದೆ.
ರಾಜ್ಯದಲ್ಲಿ ಕೂಡಾ ಮಸೀದಿಯಲ್ಲಿನ ಧ್ವನಿವರ್ಧಕ ಗಳನ್ನು ಬಂದ್ ಮಾಡಬೇಕು. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಜೊತೆಗೆ ಪರಿಸರ ಮಾಲಿನ್ಯ ಕೂಡಾ ಆಗುತ್ತಿದೆ. ರಂಜಾನ್ ಸಮಯದಲ್ಲಿ ಸೈರನ್ ಬಳಸೋದರಿಂದ ಕೂಡಾ ಜನರಿಗೆ ಕಿರಿಕಿರಿ ಆಗುತ್ತಿದೆ. ರಾಜ್ಯದಲ್ಲಿ ಮಸೀದಿಯಲ್ಲಿನ ಧ್ವನಿವರ್ಧಕ ನಿಷೇಧ ಮಾಡುವಂತೆ ಮನವಿ ಮಾಡಿದ್ದೆವು. ಆದರೆ ಇಲ್ಲಿವರಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದ್ರು ಕೂಡಲೇ ಮಸೀದಿಯಲ್ಲಿನ ಧ್ವನಿವರ್ಧಕಗಳನ್ನು ನಿಷೇಧಿಸಬೇಕು ಅಂತ ಕಲಬುರಗಿಯಲ್ಲಿ ಸಿದ್ದಲಿಂಗ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಇದನ್ನು ಓದಿ :- ಮತ್ತೆ 110 ರೂ.ಗಳತ್ತ ಪೆಟ್ರೋಲ್, ಡೀಸೆಲ್ ದರ