ಆಂಧ್ರಪ್ರದೇಶದಲ್ಲಿ ಇಂದಿನಿಂದ 13 ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದಿವೆ. ಈ ಮೂಲಕ ಆಂಧ್ರದ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇಂದು ಗುಂಟೂರು ಜಿಲ್ಲೆಯ ತಾಡೇಪಲ್ಲಿಯಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ 13 ಹೊಸ ಜಿಲ್ಲೆಗಳನ್ನು. ಸಿಎಂ ಜಗನ್ ರೆಡ್ಡಿ ಇಂದು ಉದ್ಘಾಟನೆ ಮಾಡಿದ್ದಾರೆ.
ಈ ಜಿಲ್ಲೆಗಳ ರಚನೆಗೆ ಅವಿರತವಾಗಿ ಶ್ರಮಿಸಿ, ತೊಡಗಿಸಿಕೊಂಡಿದ್ದ ಸ್ವಯಂಸೇವಕರು, ವಾರ್ಡ್ಗಳ ಕಾರ್ಯದರ್ಶಿಗಳಿಗೆ ಏಪ್ರಿಲ್ 6ರಂದು ಸಿಎಂ ಸನ್ಮಾನ ಮಾಡಲಿದ್ದಾರೆ. ಹೊಸ ಜಿಲ್ಲೆಗಳು ರಚನೆಗೊಂಡ ಬೆನ್ನಲ್ಲೇ ಅವುಗಳಿಗೆ ಐಎಸ್-ಐಪಿಎಸ್ ಅಧಿಕಾರಿಗಳ ನೇಮಕ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನೂ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ನೇಮಕ ಮಾಡಿದೆ. ತಾವು ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿರುವ ಪ್ರತಿ ಲೋಕಸಭಾ ಕ್ಷೇತ್ರಗಳನ್ನೂ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು 2019ರ ಚುನಾವಣೆ ವೇಳೆ ಜಗನ್ ರೆಡ್ಡಿ ಭರವಸೆ ಕೊಟ್ಟಿದ್ದರು. ಅದರಂತೆ ಈಗ 13 ಜಿಲ್ಲೆಗಳನ್ನು ರೂಪಿಸಲಾಗಿದೆ.
ಇದನ್ನು ಓದಿ : –ಮಸೀದಿ ಸೌಂಡ್ ಬ್ಯಾನ್ ಗೆ ಮುಂದಾದ ಹಿಂದೂ ಸಂಘಟನೆಗಳು