ಬಿನ್ನಿಪೇಟೆ ವಾರ್ಡ್ ಮಾಜಿ ಕಾರ್ಪೋರೇಟರ್ ಐಶ್ವರ್ಯ ನಾಗರಾಜ್ ಪತಿ ಲೋಹಿತ್ ನಾಪತ್ತೆಯಾಗಿದ್ದಾರೆ. ಮಾರ್ಚ್ 29 ರಂದು ಹೊಸಕೋಟೆ ತಾಲೂಕಿನ ನಂದಗುಡಿ ಬಳಿಯಿರೋ ರೇಸ್ ಜಮೀನಿನ ಬಳಿಗೆ ಬಂದಿದ್ದರು. ಸ್ನೇಹಿತನ ಬಳಿ ಹಣ ಪಡೆದು ಟ್ರಾಕ್ ಬಳಿಗೆ ಹೋಗಿ ಬರೋದಾಗಿ ಲೋಹಿತ್ ಹೇಳಿದ್ದರು.
ಈ ವೇಳೆ ನಂದಗುಡಿ ಬಳಿ ಹೆದ್ದಾರಿ ಬದಿಯಲ್ಲಿ ಕಾರು ಪಂಚರ್ ಆದ ಸ್ಧಿತಿಯಲ್ಲಿ ಪತ್ತೆಯಾಗಿದೆ. ಕಾರಿನ ಬಳಿ ರಕ್ತದ ಕಲೆಗಳು ಪತ್ತೆಯಾಗಿರೂ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದೆ. ನಂದಗುಡಿ ಪೊಲೀಸರಿಂದ ನಾಪತ್ತೆಯಾದ ಲೋಹಿತ್ ಗಾಗಿ ತೀವ್ರ ಹುಡುಕಾಟ ಶುರುವಾಗಿದೆ.
ನಂದಗುಡಿ ಬಳಿಯ ಜಮೀನಿನಲ್ಲಿ ಲೋಹಿತ್ ರೇಸ್ ಟ್ರಾಕ್ ಮಾಡಿದ್ದ. ಹೀಗಾಗಿ ರೇಸ್ ಟ್ರಾಕ್ ಬಳಿಗೆ ಹೋಗಿ ಬರೋದಾಗಿ ಹೇಳಿ ಬಂದಿದ್ದರು. ಲೋಹಿತ್ ಮೊಬೈಲ್ ಸ್ವಿಚ್ ಆಪ್ ಆಗಿದ್ದು ಹುಡುಕಿಕೊಂಡು ಬಂದಾಗ ಹೆದ್ದಾರಿ ಬದಿಯಲ್ಲಿ ಕಾರು ಪತ್ತೆಯಾಗಿದೆ. ಕಾರಿನ ಸಮೀಪದ ದೇವಸ್ಥಾನದ ಬಳಿ ಚಪ್ಪಲಿ ಮತ್ತು ಬೆಲ್ಟ್ ಪತ್ತೆಯಾಗಿದೆ. ವಿಶೇಷ ತನಿಖಾ ತಂಡದಿಂದ ನಾಪತ್ತೆಯಾಗಿರೂ ಲೋಹಿತ್ ಗಾಗಿ ತೀವ್ರ ಹುಡುಕಾಟ ಹುಡುಕಾಟ ನಡೆಯುತ್ತಿದೆ.
ಇದನ್ನು ಓದಿ :- ಇದು ಶೇಖಾವತ್ ಎಂಬ ಖತರ್ನಾಕ್ ಕಳ್ಳನ ಇಂಟರೆಸ್ಟಿಂಗ್ ಸ್ಟೋರಿ..!