ಒಂದೇ ಬೈಕ್ ನಲ್ಲಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು ಬೈಕ್ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಓರ್ವ ಬಾಲಕ ಸ್ಧಳದಲ್ಲೇ ಸಾವನ್ನಪ್ಪಿರುವ ಘಟನೆ ಕುಣಿಗಲ್ ತಾಲ್ಲೂಕಿನ ಜಿನ್ನಾಗರ ಗ್ರಾಮದ ಬಳಿ ನಡೆದಿದೆ.
ನವೀನ್(16) ಸ್ಥಳದಲ್ಲೇ ಮೃತಪಟ್ಟ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ. ಬೈಕ್ ನಲ್ಲಿದ್ದ ಶರತ್, ದರ್ಶನ್ ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಧಳಕ್ಕೆ ಅಮೃತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : – ತುಮಕೂರಿನಲ್ಲಿ ಬಡಜನರ ಗುಡಿಸಲಿನ ಮೇಲೆ ಅರಣ್ಯ ಇಲಾಖೆ ಕಣ್ಣು