ಸಾಮಾನ್ಯವಾಗಿ ಎಲ್ಲರೂ ಫಿಟ್ ಆಗಿರಲು ಬಯಸುತ್ತಾರೆ. ಇದಕ್ಕೆ ದೈಹಿಕ ವ್ಯಾಯಾಮದ ಜೊತೆಗೆ , ಆಹಾರ ಕ್ರಮದ ಮೇಲೆ ಗಮನಹರಿಸುವುದು ಕೂಡಾ ಬಹಳ ಮುಖ್ಯ. ನಾವು ಪ್ರತಿದಿನ ಸೀಮಿತ ಪ್ರಮಾಣದಲ್ಲಿ ಮಾತ್ರ ಆಹಾರವನ್ನು ಸೇವಿಸಬೇಕು.
ಇದಕ್ಕಾಗಿ ಆರೋಗ್ಯಕರ ಆಹಾರವನ್ನು ನಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ನಾವು ಸೇವಿಸುವ ಆರೋಗ್ಯಕರ ಆಹಾರ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ ನಿಜ. ಅದರೆ ಜೊತೆಗೆ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕೂಡಾ ನೀಡುತ್ತದೆ. ಪೌಷ್ಠಿಕಾಂಶದ ಮೌಲ್ಯವನ್ನು ಹೊಂದಿರುವ ವಿಶ್ವದ 10 ಆರೋಗ್ಯಕರ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಬೇಳೆ ಕಾಳುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೆಸರು, ಹೆಸರು ಕಾಳು, ಮಸೂರ್ ದಾಲ್, ಕಡಲೆ ಕಾಳು, ಉದ್ದಿನ ಬೇಳೆ, ಹೀಗೆ ಯಾವ ಬೇಳೆ ಕಾಳುಗಳೇ ಆಗಿರಲಿ ಇದು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ ಆಹಾರವ ಗಿದೆ. ಬೇಳೆ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶವನ್ನು ಹೊಂದಿರುತ್ತವೆ. ಇದನ್ನು ಓದಿ : – ಬೇಸಿಗೆ ದಾಹಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್ – ನಿರ್ಲಕ್ಷ್ಯಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ…
ಅಲ್ಲದೆ, ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಕೂಡ ಇದ್ದು, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ. ಅಗಸೆ ಬೀಜಗಳು ಆಲ್ಫಾ-ಲಿನೋಲೆನಿಕ್ ಆಮ್ಲವನ್ನು ಹೊಂದಿವೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತಪ್ಪಿಸಲು ಸಹಕಾರಿಯಾಗಿದೆ. ಇದು ಆಸ್ತಮಾ, ಮಲಬದ್ಧತೆಯನ್ನು ದೂರವಿರಲು ಸಹಾಯ ಮಾಡುತ್ತದೆ.
ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಬೆಳ್ಳುಳ್ಳಿ ಎಷ್ಟು ಪ್ರಯೋಜನಕಾರಿ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಬೆಳ್ಳುಳ್ಳಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್, ಆಂಟಿಫಂಗಸ್ ಮತ್ತು ಆಂಟಿವೈರಲ್ ಗುಣಗಳಿಂದಾಗಿ ರೋಗಗಳಿಂದ ನಮ್ಮನ್ನು ಕಾಪಾಡಿಕೊಳ್ಳಬಹುದು. ವಾರಕ್ಕೆ ಕೇವಲ 6 ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕ್ಯಾನ್ಸರ್ ಅಪಾಯವನ್ನು 50 ಪ್ರತಿಶತದಷ್ಟು ಕಡಿಮೆ ಮಾಡಬಹುದು. ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ದೇಹದಿಂದ ಕ್ಯಾನ್ಸರ್ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮತ್ಯಾಕೆ ತಡ. ಈ ಆಹಾರಗಳನ್ನ ಸೇವಿಸಿ. ಫಿಟ್ ಅಂಡ್ ಫೈನ್ ಆಗಿರಿ.
ಇದನ್ನು ಓದಿ : – ಊಟದ ನಂತರ ಯಾವ ಹಣ್ಣನ್ನು ಸೇವಿಸಬೇಕು ಗೊತ್ತಾ..? ಇಲ್ಲಿದೆ ಸಂಪೂರ್ಣ ಮಾಹಿತಿ