ಇಡೀ ರಾಷ್ಟ್ರದಲ್ಲಿ ರಾಮ ನವಮಿ ಅಚರಣೆ ಮಾಡ್ತಿದ್ದಾರೆ. ಭಾರತ ದೇಶ ಹಿಂದೂ ರಾಷ್ಟ್ರ ಆಗಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು ಭಾರತ ದೇಶ ಹಿಂದೂ ರಾಷ್ಟ್ರ ಆಗಬೇಕು ಅನ್ನೋ ದೃಷ್ಟಿಕೋನದಿಂದಲೇ ಶ್ರೀರಾಮ ನವಮಿಯನ್ನ ಅದ್ದೂರಿಯಾಗಿ ಆಚರಣೆ ಮಾಡ್ತಾ ಇದ್ದೇವೆ ಎಂದು ತಿಳಿಸಿದ್ರು. ಇದನ್ನುಓದಿ : – ಕೋಲಾರದಲ್ಲಿ ಶೋಭಾಯಾತ್ರೆ ರದ್ದು-ಬೆಂಗಳೂರಿನಲ್ಲಿ ಬಿಗಿ ಭದ್ರತೆ
ಮುಳಬಾಗಿಲಿನಲ್ಲಿ ಶ್ರೀರಾಮ ಶೋಭಾಯಾತ್ರೆ ಕಲ್ಲು ತೂರಾಟ ಪ್ರಕರಣ
ಅದು ಅನ್ಯಕೋಮಿನವರ ವ್ಯವಸ್ಥಿತ ಪಿತೂರಿಯಾಗಿದೆ.ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ. ವಿರೋಧ ಸಹ ವ್ಯಕ್ತ ಪಡಿಸ್ತೇನೆ. ಪ್ರಿ ಪ್ಲಾನ್ ಮಾಡಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ.
ವ್ಯವಸ್ಥಿತವಾಗಿ ಪ್ರಿ ಪ್ಲಾನ್ ಮಾಡಿ ಮಾಡಿರೋದು ಸ್ಫಷ್ಟವಾಗಿ ತಿಳಿಯುತ್ತದೆ. ವಿದ್ಯುತ್ ತೆಗೆಯುವ ಮೂಲಕ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಿದ್ರು.
ಇದನ್ನುಓದಿ : – ಬಿಜೆಪಿ ನಾಯಕರಿಗೆ ನಿಜವಾಗಿಯೂ ಹುಚ್ಚು ಹಿಡಿದಿದೆ – ಬಿ.ವಿ.ಶ್ರೀನಿವಾಸ್