ನವದೆಹಲಿಯ ಜವಹಾರಲಾಲ್ ನೆಹರೂ ವಿಶ್ವವಿದ್ಯಾಲಯದ ಹಾಸ್ಟೆಲ್ ಮೆಸ್ ನಲ್ಲಿ ರಾಮನವಮಿ ಸಂದರ್ಭದಲ್ಲಿ ಮಾಂಸಹಾರ ಬಡಿಸಿದ ವಿಚಾರದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಭಾರಿ ಘರ್ಷಣೆ ನಡೆದಿದೆ. ದಿಲ್ಲಿ ಪೊಲೀಸರು ಈ ಘಟನೆ ಸಂಬಂಧ ಎಫ್ಐಆರ್ (FIR) ದಾಖಲು ಮಾಡಿದ್ದಾರೆ.
ಭಾನುವಾರ ಸಂಜೆ ಜೆಎನ್ ಯು (JNU) ಹಾಸ್ಟೆಲ್ ಆವರಣದಲ್ಲಿ ಈ ಮಾರಾಮಾರಿ ನಡೆದಿದೆ. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ಕನಿಷ್ಠ 16 ವಿದ್ಯಾರ್ಥಿಗಳು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಇದನ್ನು ಓದಿ :- ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ
ಎಬಿವಿಪಿ ಸದಸ್ಯರು ಕೂಡ ಇಂದು ದೂರು ದಾಖಲಿಸುವ ಸಾಧ್ಯತೆ ಇದೆ. ಎಬಿವಿಪಿ ದೂರು ಪಡೆದ ಬಳಿಕ ಎರಡೂ ದೂರುಗಳನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿ ನಿಲಯದ ಮೆಸ್ ನಲ್ಲಿ ವಿದ್ಯಾರ್ಥಿಗಳು ಮಾಂಸಾಹಾರ ಸೇವನೆ ಮಾಡುವುದನ್ನು ತಡೆದ ಎಬಿವಿಪಿ ವಿದ್ಯಾರ್ಥಿಗಳು, ಹಿಂಸಾತ್ಮಕ ವಾತಾವರಣ ಸೃಷ್ಟಿಸಿದರು ಎಂದು ಜೆಎನ್ ಯು ಆರೋಪ ಮಾಡಿದೆ.
ಇದನ್ನು ಓದಿ :- ವಿಶ್ವಾಸಮತ ಗಳಿಸುವಲ್ಲಿ ವಿಫಲವಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್