ಸಂತೋಷ್ ಪಾಟೀಲ್ ಅತ್ಮಹತ್ಯೆ ಪ್ರಕರಣವನ್ನ ಸಿಬಿಐ (cbi) ಅಥವಾ ಹೈಕೋರ್ಟ್ (highcourt) ಹಾಲಿ ನ್ಯಾಯಧೀಶರಿಂದ ತನಿಖೆ ನಡೆಸಬೇಕು ಎಂದು ಗುಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಆತ್ಮಹತ್ಯೆ (Suicide) ಮಾಡಿಕೊಂಡ ಗುತ್ತಿಗೆದಾರರ ಕುಟುಂಬಕ್ಕೆ ೨ ಕೋಟಿ ಪರಿಹಾರ (9 crore compensation) ನೀಡಬೇಕು.
ಕೂಡಲೇ ಗುತ್ತಿಗೆ ಹಣ ಬಿಡುಗಡೆ ಮಾಡುವಂತೆಯೂ ಆಗ್ರಹಿಸಿದ್ದಾರೆ. ಗುತ್ತಿಗೆದಾರನ ಸಾವಿಗೆ ಸರ್ಕಾರವೇ ನೇರ ಹೊಣೆಯಾಗಿದೆ. ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಸಾವಿಗೆ ಯಾರು ಕಾರಣ ಅಂತ ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಸಂತೋಷ್ ಪಾಟೀಲ್ ಸಚಿವರು ಶೇಕಡಾ ೪೦ ರಷ್ಟು ಕಮೀಷನ್ ಕೇಳುತ್ತಿದ್ದಾರೆ ಅಂತ ಆರೋಪ ಮಾಡಿದ್ದರು. ದೆಹಲಿಗೆ ತೆರಳಿ ಅಮಿತ್ ಷಾಗೆ ಮೋದಿಗೂ ದೂರು ಸಲ್ಲಿಸಿದ್ದರು. ದೆಹಲಿಯಲ್ಲಿ ದೂರು ಕೊಟ್ಟಾಗಲೇ ಸ್ಪಂದನೆ ಮಾಡಿದ್ದರೆ ಜೀವ ಉಳಿಯುತ್ತಿತ್ತು. ಸಚಿವರು ಮಾನವೀಯತೆಯಿಂದ ನಡೆದುಕೊಂಡಿದ್ದರೆ ಜೀವ ಬಲಿಯಾಗುತ್ತಿರಲಿಲ್ಲ ಎಂದುಎಂದು ಹೇಳಿದ್ರು.
1 ತಿಂಗಳು ಕೆಲಸ ಸ್ಥಗಿತಗೊಳಿಸಲು ತೀರ್ಮಾನ
ಸಂಘದ ವತಿಯಿಂದ ಸಂತಾಪ ಸೂಚಿಸಿ ಒಂದು ತಿಂಗಳು ಕೆಲಸ ಸ್ಥಗಿತಗೊಳಿಸುವಂತೆ ತೀರ್ಮಾನ ಕೈಗೊಳಕೈಗೊಳ್ಳಲಾಗಿದೆ ಎಂದು ಹೇಳಿದ್ರು. ಮೇ ೨೫ ರಿಂದ ಒಂದು ತಿಂಗಳು ರಾಜ್ಯಾದ್ಯಂತ ಕೆಲ್ಸ ಸ್ಥಗಿತಗೊಳಿಸೋದಾಗಿ ತಿಳಿಸಿದ್ದಾರೆ. ಇದನ್ನು ಓದಿ :- ಪಕ್ಷಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಇದನ್ನೆಲ್ಲಾ ಮಾಡುತ್ತಿದೆ – ಸುಧಾಕರ್
ಭ್ರಷ್ಟಚಾರ ಹೆಚ್ಚಿದ್ದರೂ ಸಿಎಂ ಮೌನವಾಗಿರೋದು ಸರಿಯಲ್ಲ . ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಚಾರ ನಡೀತಾಇದೆ. ರೌಡಿಗಳ ಮೂಲಕ ಬೆದರಿಕೆ ಹಾಕಿಸೋ ಕೆಲ್ಸ ಸರ್ಕಾರ ಮಾಡ್ತಿದೆ. ನಮ್ಮ ಹತ್ರನೂ ಭ್ರಷ್ಟಚಾರದ ದಾಖಲೆಗಳಿವೆ. ದಾಖಲೆ ಬಿಡುಗಡೆಗೆ ನಾವು ಹೆದರುತ್ತಿದ್ದೇವೆ. ಇದು ರೌಡಿಗಳ ಸರ್ಕಾರ ಎಂದು ನೇರ ಆರೋಪ ಮಾಡಿದ್ದಾರೆ.
ಸುಧಾಕರ್ ಗೂ ಕಮಿಷನ್ ಕೊಡಬೇಕು
ಆರೋಗ್ಯ ಇಲಾಖೆ, ನೀರಾವರಿ ಇಲಾಖೆ, ಬಿಬಿಎಂಪಿಯಲ್ಲಿ ಅತಿ ಹೆಚ್ಚು ಭ್ರಷ್ಟಚಾರ ನಡೀತಾ ಇದೆ. ಹೆಲ್ತ್ ಮಿನಿಸ್ಟರ್ ಸುಧಾಕರ್ (Sudhakar) ನೇರವಾಗಿ ಕಮೀಷನ್ ಪಡೀತಾರೆ ಎಂದು ಆರೋಪಿಸಿದ್ದಾರೆ.
ಶೇ ೫ ರಷ್ಟು ಕಮೀಷನ್ ಕೊಟ್ಟರೆ ಟೆಂಡರ್ ಗೆ ಅನುಮೋದನೆ ಕೊಡ್ತಾರೆ. ಆರೋಗ್ಯ ಇಲಾಖೆ, ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಟಾಪ್ ಭ್ರಷ್ಟಚಾರ ನಡೀತಾ ಇರೋ ಇಲಾಖೆಗಳು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿ :- ತಪ್ಪು ಮಾಡಿದವರು ಶಿಕ್ಷೆ ಅನುಭವಿಸ್ತಾರೆ – ಸಿ.ಟಿ. ರವಿ