ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು. ಒಬ್ಬ ಸಚಿವರ ಮೇಲೆ ಈ ರೀತಿಯ ಗಂಭೀರ ಆರೋಪ ಬಂದಾಗ ರಾಜೀನಾಮೆ ಕೊಡಲೇಬೇಕು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
ಮೈಸೂರಿನ ತಿ.ನರಸೀಪುರದಲ್ಲಿ ಮಾತನಾಡಿದ ಅವರು ಈಶ್ವರಪ್ಪನನವರು ರಾಜೀನಾಮೆ ಕೊಡದೆ ಇದ್ದರೆ ಮುಖ್ಯಮಂತ್ರಿಗಳೇ ಸ್ವತಃ ತಾವೇ ರಾಜೀನಾಮೆ ಪಡೆಯಬೇಕು. ಈಗಾಗಲೇ 40% ಕಮಿಷನ್ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಜೊತೆಗೆ ಗುತ್ತಿಗೆದಾರರರೊಬ್ಬ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಓದಿ :- ಆರೋಗ್ಯ ಇಲಾಖೆಯಲ್ಲೂ ಭ್ರಷ್ಟಾಚಾರ ! ಸಂತೋಷ್ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡಿ – ಗುತ್ತಿಗೆದಾರರ ಸಂಘ ಆಗ್ರಹ
ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಸಚಿವ ಸಂಪುಟದಿಂದ ಕೈ ಬಿಡುವಂತೆ ಮನವಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಹಾಗೂ ಈಶ್ವರಪ್ಪ ವಿರುದ್ಧ ರಾಜ್ಯದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ :- ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ನಾನು ಕಾರಣ ಅಲ್ಲ- ನಾನ್ಯಾಕೆ ರಾಜೀನಾಮೆ ಕೊಡಲಿ: ಕೆ ಎಸ್ ಈಶ್ವರಪ್ಪ