ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಿಎಸ್ಐ (PSI) ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಕಲ್ಬುರ್ಗಿ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಒಡತಿ ಇನ್ನೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ ಏಳು ದಿನಗಳಿಂದ ಸಿಐಡಿ ಪೋಲಿಸರು ದಿವ್ಯಾ ಹಾಗರಗಿಗಾಗಿ ಹುಡಕಾಟ ನಡೆಸುತ್ತಿದ್ದರೂ ಈವರೆಗೆ ದಿವ್ಯ ಅವರನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ದಿವ್ಯಾ ಪತಿ ರಾಜೇಶ್ ಹಾಗರಗಿಯ ಮಾಹಿತಿ ಮೇರೆಗೆ ವಿಜಯಪುರಕ್ಕೂ ಕೂಡ ಸಿಐಡಿ ತಂಡ ಹೋಗಿ ಬರಿಗೈನಲ್ಲಿ ವಾಪಸ್ಸಾಗಿದೆ. ಇದನ್ನೂ ಓದಿ :- ಆನೇಕಲ್ ಪಟ್ಟಣದಲ್ಲಿ ಅದ್ದೂರಿಯಾಗಿ ನೆರವೇರಿದ ದ್ರೌಪತಿ ದೇವಿ ಒಣ ಕರಗ
ಹಾಗಾದ್ರೆ ಸಿಐಡಿ (CID) ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ದಿವ್ಯಾ ಹೋಗಿದ್ದಾದ್ರು ಎಲ್ಲಿಗೆ ಎಂಬ ಜಿಜ್ಞಾಸೆ ಮೂಡಿದೆ. ದಿವ್ಯಾ ಹಾಗರಗಿ ಕರ್ನಾಟಕ ಬಿಟ್ಟು ಬೇರೆಲ್ಲೂ ಹೋಗಿಲ್ಲ ಬೆಂಗಳೂರಿನಲ್ಲೇ ಇದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು ದಿವ್ಯಾ ಹಾಗರಗಿಗಾಗಿ ಬೆಂಗಳೂರಿನಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದೆ.
ದಿವ್ಯಾ ಜೊತೆಗೆ ಹಲವಾರು ನಾಪತ್ತೆ
ಒಂದು ಕಡೆ ಜ್ಞಾನ ಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ನಾಪತ್ತೆಯಾದರೆ. ಮತ್ತೊಂದೆಡೆ ಜ್ಞಾನ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್, ಇಬ್ಬರು ಟೀಚರ್ಸ್ ಹಾಗೂ ಪಿಎಸ್ಐ ಕ್ಯಾಂಡಿಡೇಟ್ ಗಳನ್ನ ಹುಡುಕಿ ಡೀಲ್ ಕುದುರಿಸುತ್ತಿದ್ದ ನಿರಾವರಿ ಇಲಾಖೆಯ ಇಂಜನಿಯರ್ ಮಂಜುನಾಥ ಕೂಡ ನಾಪತ್ತೆಯಾಗಿದ್ದಾರೆ.
ಸಿಐಡಿ ಅಧಿಕಾರಿಗಳು ತಲೆ ಮರೆಸಿಕೊಂಡ ಆರೋಪಿಗಳಿಗಾಗಿ ತೀವ್ರಶೋಧ ನಡೆಸುತ್ತಿದ್ದು, ಇಂದು ಜ್ಞಾನ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಮನೆಗೆ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಸಿಐಡಿ ತಂಡ ಭೇಟಿ ನೀಡಲಿದೆ. ಇದನ್ನೂ ಓದಿ :- ಬಿಬಿಎಂಪಿ ಕಸದ ಲಾರಿಗಳನ್ನು ಪರಿಶೀಲನೆ ನಡೆಸುತ್ತಿರುವ ಸಂಚಾರಿ ಪೋಲೀಸರು
ಹಾಗರಗಿ ರಕ್ಷಣೆಗೆ ನಿಂತ್ರಾ ಬಿಜೆಪಿಯ ಪ್ರಭಾವಿ ಸಚಿವರುಗಳು..!
ಸರ್ಕಾರದ ಹಲವು ಸಚಿವರ ಜೊತೆ ಉತ್ತಮ ಒಡನಾಟ ಹೊಂದಿದ್ದ ದಿವ್ಯಾ ಹಾಗರಗಿ ಕಲಬುರಗಿ ವಿಜಯಪುರ ಬಿಟ್ಟು ಬೆಂಗಳೂರಿನಲ್ಲಿ ಬಿಡು ಬಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಚಿವರ ಆಶ್ರಯದಲ್ಲಿ ಸೇಫ್ ಆಗಿದ್ದಾರ ದಿವ್ಯಾ ಹಾಗರಗಿ..? ಎಂಬ ಅನುಮಾನಗಳು ದಟ್ಟವಾಗುತ್ತಿವೆ. ದಿವ್ಯಾ ಹಾಗರಗಿ ಹಿಂದೆ ಪ್ರಭಾವಿ ಸಚಿವರ ಕೃಪಾಕಟಾಕ್ಷ ಇದೆ ಎಇದೆ ಎನ್ನಲಾಗಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು ದಿವ್ಯಾಳನ್ನ ಟಚ್ ಮಾಡೋಕೆ ಆಗ್ತಲ್ವಾ ಎಂಬ ಮಾತುಗಳು ಕೇಳಿ ಬರ್ತಿದೆ.
ಇದನ್ನೂ ಓದಿ :- ‘ಕೆಜಿಎಫ್–2’ – ಚೇರ್ ನಿಂದ ಶುರವಾದ ಜಗಳ ಗುಂಡೇಟಿನಲ್ಲಿ ಅಂತ್ಯ