ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 397 ಜನರು ಉತ್ತರಪ್ರದೇಶ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸ್ವಲ್ಪ ಉಸಿರಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತೆ. ಬಹುತೇಕ ನಾಯಕರು ಕಾಂಗ್ರೆಸ್ ನಲ್ಲಿ ಉಳಿಯಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಮುಂದಾಗಿದ್ಧೇವೆ. ಜಿಲ್ಲಾ ಮಟ್ಟದಲ್ಲಿ ಮನೆ ಮನೆಗೂ ತೆರಳಿ ಸರ್ವೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ :- ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ
ಕಾಂಗ್ರೆಸ್ ಕಾನ್ಪಿರೆಸ್ಸಿ ಪಾರ್ಟಿ
ಬಯಲು ಸೀಮೆಯಲ್ಲಿ ಬಿಜೆಪಿಯ ಕಮಲ ಅರಳಿದೆ. ಕೋಲಾರ ಚಿಕ್ಕಬಳ್ಳಾಪುರದಲ್ಲಿ ಎರಡು ಎಂಪಿ, ಎರಡು ಎಮ್ ಎಲ್ ಸಿ ಗೆದ್ದಿದ್ದಾರೆ. ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಮಲ ಗೆದ್ದಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ರು.
ಬಿಜೆಪಿ ಈ ಭಾರಿ ರಾಜ್ಯದಲ್ಲಿ 150 ಸೀಟ್ ಗೆಲ್ಲುವುದು ಖಚಿತ. ಕಾಂಗ್ರೆಸ್ ಪಕ್ಷ ನಾಯಕರಿಲ್ಲದ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಕನ್ಪ್ಯೂಷನ್. ಕ್ಲೀಯರ್ ಕಟ್ ಪಾಲಿಸಿ ಕಾಂಗ್ರೆಸ್ ನಲ್ಲಿಲ್ಲ. ಕರ್ನಾಟಕ ಕಾಂಗ್ರೆಸ್ ಕಾನ್ಪಿರೆಸ್ಸಿ ಪಾರ್ಟಿ. ಇಂತಹ ಪಾರ್ಟಿ ಎಂದು ಯಶಸ್ಸು ಕಾಣುವುದಿಲ್ಲ ಎಂದು ಅರುಣ್ ಸಿಂಗ್ ದೂರಿದ್ರು.
ಇದನ್ನು ಓದಿ :- ಭಾರತಕ್ಕೆ ಭೇಟಿ ನೀಡಿದ ಬೋರಿಸ್ ಜಾನ್ಸನ್ – ಗಾಂಧಿ ಆಶ್ರಮದಲ್ಲಿ ಚರಕ ತಿರುಗಿಸಿದ ಬ್ರಿಟನ್ ಪ್ರಧಾನಿ !