ಹಳೆ ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ವಾಸೀಂ ಪಠಾಣ್ ರಹಸ್ಯ ಸ್ಥಳದಲ್ಲಿ ಕುಳಿತು ವೀಡಿಯೋ ಹರಿಬಿಟ್ಟಿದ್ದಾನೆ.
ಆದಷ್ಟು ಬೇಗ ಪೊಲೀಸರಿಗೆ ಶರಣಾಗುವುದಾಗಿ ಹೇಳಿದ್ದಾನೆ. ನಾನು ಪ್ರಚೋದನೆ ನೀಡಿಲ್ಲ. ಗಲಭೆಕೋರರನ್ನ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದೆ.
ಪ್ರತಿಭಟನೆ ಸಂದರ್ಭದಲ್ಲಿ ಕರೆಂಟ್ ಹೋಯ್ತು.ಕೆಲ ಜನ ಮುಖಕ್ಕೆ ಮಾಸ್ಕ್ ಹಾಕಿಕೊಂಡವರನ್ನ ನಾನು ನೋಡಿದ್ದೆ ಎಂದು ತಿಳಿಸಿದ್ದಾನೆ. ಪೊಲೀಸರಿಗೆ ತನಿಖೆಗೆ ಎಲ್ಲಾ ರೀತಿಯಲ್ಲಿ ಸಹಕರಿಸುವುದಾಗಿ ತಿಳಿಸಿದ್ದಾನೆ.ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾರನ್ನೂ ಪ್ರಚೋದಿಸುವ ಮಾತು ಆಡಿಲ್ಲ ಎಂದು ಹೇಳಿದ್ದಾನೆ. ಆದರೂ ನನ್ನ ಮಾಸ್ಟರ್ ಮೈಂಡ್ ಅನ್ತಾರೆ ಎಂದು ದೂರಿದ್ದಾನೆ.
ಇದನ್ನು ಓದಿ :- ಸಂತೋಷ್ ಪಾಟೀಲ್ ನಾನು ಮುಖಾಮುಖಿ ಎಂದೂ ಭೇಟಿಯಾಗಿಲ್ಲ – ಆಶಾ ಐಹೊಳೆ