ಮಾಧುಸ್ವಾಮಿ ಅವರ ಮಗನ ಮದುವೆಗೆ ಕರೆದಿದ್ದರು ಬಂದಿದ್ದೀನಿ. ಮಾಧುಸ್ವಾಮಿ ಈಗ ಬಿಜೆಪಿಯಲ್ಲಿ ಇದ್ರೂನು ಮೊದಲು ನಮ್ಮ ಜೊತೆ ಇದ್ದವರು ಎಂದು ಚಿಕ್ಕನಾಯಕನಹಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧುಸ್ವಾಮಿ ನನಗೆ ರಾಜಕೀಯವಾಗಿ ಬಹಳ ಆಪ್ತರು. ರಾಜಕೀಯ ಬೇರೆ ಸ್ನೇಹ ಬೇರೆ. ಮದುವೆಗೆ ಬಂದು ಅವರ ಮಕ್ಕಳಿಗೆ ಶುಭಕೋರಿದ್ದೇನೆ ಎಂದರು.
ಕುಮಾರಸ್ವಾಮಿ ಕಂಡರೆ ಸಿದ್ದರಾಮಯ್ಯಗೆ ಭಯನಾ..?
ನಾನು ರಾಜಕೀಯಕ್ಕೆ ಬಂದಾಗ ಇವರ್ಯಾರು ಅಂತಾನೆ ನನಗೆ ಗೊತ್ತಿರ್ಲಿಲ್ಲ. ನಾನು 1978ರಲ್ಲಿ ರಾಜಕೀಯಕ್ಕೆ ಬಂದೆ. ಆಗ ಇವನು ಎಲ್ಲಿದ್ದ ಕುಮಾರಸ್ವಾಮಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. 1983ರಲ್ಲಿ ನಾನು ಎಂಎಲ್ ಎ ಆಗಿದ್ದಾಗ ಕುಮಾರಸ್ವಾಮಿ ಎಲ್ಲಿದ್ದ. ನಾನು ರಾಜಕೀಯಕ್ಕೆ ಬಂದಾಗ ಕುಮಾರಸ್ವಾಮಿ ಇರ್ಲೇ ಇಲ್ಲ.
ನನಗೆ ಯಾವಾಗ್ಲೂ ದ್ವೇಷದ ರಾಜಕಾರಣ ಮಾಡಿ ಗೊತ್ತಿಲ್ಲ.
ನಾನು ಏನಿದ್ರೂ ಸ್ನೇಹದ ರಾಜಕಾರಣ ಮಾಡೋದು. ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡ್ತಾರೆ. ನಾನು ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲ್ಲ. ಮಾಧುಸ್ವಾಮಿಯವರನ್ನ ಯಾಕೆ ಕಾಂಗ್ರೆಸ್ ಗೆ ಕರೆದುಕೊಂಡು ಬರೋಣ ಅವರು ಬಿಜೆಪಿ ಯಲ್ಲಿದ್ದಾರೆ ಇರಲಿ ಬಿಡಿ. ನಾನು ಸ್ನೇಹಕ್ಕಾಗಿ ಮದುವೆಗೆ ಬಂದಿದ್ದೇನೆ ಹೊರತು ರಾಜಕಾರಣಕ್ಕಾಗಿ ಅಲ್ಲ. ಮೈಸೂರು ಭಾಗದಲ್ಲಿ 15 ಕ್ಕೆ 15 ಗೆಲ್ತೀವಿ ಅಂದ್ರೆ ನೀವು ನಂಬಲ್ಲ ಅದಕ್ಕೆ 13 ರಿಂದ 14 ಅಂದೆ. ಜೆಡಿಎಸ್ ಗೆ ಆ ಭಾಗದಲ್ಲಿ ಯಾವ ಕ್ಷೇತ್ರವನ್ನೂ ಬಿಟ್ಟುಕೊಡೋದಿಲ್ಲ. ಜೆಡಿಎಸ್ ಆ ಭಾಗದಲ್ಲಿ ಒಂದೂ ಗೆಲ್ಲಲ್ಲ ಎಂದು ಹೇಳಿದ್ರು.
ಪರೀಕ್ಷೆ ಅಕ್ರಮ ವಿಚಾರ
ಕಿಂಗ್ ಪಿನ್ ದಿವ್ಯಾ ಹಾಗೂ ಅವರ ಯಜಮಾನರು ಎಲ್ಲರೂ ಬಿಜೆಪಿಯವರು. ಹಾಗಾಗಿ ಬಿಜೆಪಿಯವರು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ರು.
ಇದನ್ನು ಓದಿ :- PSI – ಪಿಎಸ್ ಐ ನೇಮಕಾತಿ ಪ್ರಕರಣ – ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಬಂಧನ