ಕೋವಿಡ್ ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇರೆಗೆ ಕೋರ್ಟ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ವಾರಂಟ್ ಜಾರಿ ಮಾಡಿದೆ. ಕೊರೊನಾ ನಿಯಮ ಉಲ್ಲಂಘನೆ ಮಾಡಿ ಪ್ರತಿಭಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ನನಗೆ ಕೋರ್ಟ್ ವಾರೆಂಟ್ ಜಾರಿ ಮಾಡಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಇವತ್ತು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಮನ್ಸ್ ಆಗಿತ್ತು. ನಾನು ಮೊದಲೆ ಅಲ್ಲಿಗೆ ಹೋಗಬೇಕಿತ್ತು. ಕೊರೊನ ವೈರಸ್ ಸಂದರ್ಭದಲ್ಲಿ ಕೇಸ್ ಹಾಕಿದ್ದಾರೆ. ಹತ್ತು ಸಾವಿರ ಜನ ಸೇರಿಸಿದ್ದಾರೆ ಅಂತ ಕೇಸ್ ಹಾಕಿದ್ದಾರೆ. 6 ಜನರ ಮೇಲೆ ಕೇಸ್ ಹಾಕಿದ್ದಾರೆ. ಡಿಜಾಸ್ಟರ್ ಮ್ಯಾನೆಜಮೆಂಟ್ ಅಡಿಯಲ್ಲಿ ಕೇಸ್ ಹಾಕಿದ್ದಾರೆ.
ಉದ್ದೇಶಪೂರ್ವಕವಾಗಿ ಕೇಸ್ ಹಾಕಿದ್ದಾರೆ. ನಮಗೆ ಮಾತ್ರ ಕೇಸ್ ಹಾಕುತ್ತಿದ್ದಾರೆ. ಪಾದಯಾತ್ರೆ ಕೇಸ್, ರಾಮನಗರ ಕೇಸ್ ಹಾಕಿದ್ದಾರೆ. ನನ್ನನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರೆ. ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಕೋರ್ಟ್ ಗೆ ಅಲೆಯಬೇಕು ಎಂಬುದು ಅವರ ಉದ್ದೇಶ. ಶಿವಮೊಗ್ಗದಲ್ಲಿ ಈಶ್ವರಪ್ಪ, ರಾಘವೇಂದ್ರ ಪ್ರತಿಭಟನೆ ಮಾಡಿದ್ರು. ಆವಾಗ ಕಾನೂನು ಇಲ್ವಾ, ಕೊರೋನ ಇರಲಿಲ್ಲ. ಇದನ್ನು ಜನರು ನೋಡಬೇಕು ಬಿಜೆಪಿಗೆ ಉತ್ತರ ನೀಡಬೇಕು. ಕೇವಲ ದ್ವೇಷದಿಂದ ಮಾಡುತ್ತಿದ್ದಾರೆ. ರೈತರ ಪರವಾಗಿ ಹೋರಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಹೋರಾಟ ಹತ್ತಿಕ್ಕುತ್ತಿದ್ದಾರೆ, ನಾವು ಯಾವುದಕ್ಕೂ ಜಗ್ಗಲ್ಲ ಎಂದು ಡಿಕೆಶಿ ತಿಳಿಸಿದ್ದಾರೆ.
ಇದನ್ನು ಓದಿ :– ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಅವ್ರನ್ನ ಹಿಡಿ, ಇವ್ರನ್ನ ಬಿಡಿ ಎನ್ನುವುದಕ್ಕೆ – ಅರಗ ಜ್ಞಾನೇಂದ್ರ
ಪಿಎಸ್.ಐ ಪರೀಕ್ಷೆ ಅಕ್ರಮ ವಿಚಾರ
ಯಾರೇ ಇರಬಹುದು. ಅವರ ವಿರುದ್ಧ ಕ್ರಮ ಕೈಗೊಳ್ಳಿ. ಹಗರಣವನ್ನ ಬಯಲಿಗೆಳೆದಿದ್ದೆ ಕಾಂಗ್ರೆಸ್. ಪ್ರಿಯಾಂಕ್ ಖರ್ಗೆ ಮೊದಲು ಹಗರಣ ಕುರಿತು ಮಾತಾಡಿದ್ರು. 52 ಸಾವಿರ ಜನ ಪಿಎಸ್ ಐ ಪರೀಕ್ಷೆ ಬರೆದಿದ್ದಾರೆ. ಅವರಿಗೆ ಅನ್ಯಾಯವಾಗಲಿದೆ.ಪಿಎಸ್ ಐ ಪೊಸ್ಟ್ ಗೆ 50 ರಿಂದ 60 ಲಕ್ಷ ಲಂಚ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಎಲ್ಲಿ ನೋಡಿದ್ರು ಲಂಚ ಲಂಚ ಎಂದು ಕಿಡಿಕಾರಿದ್ರು.
ಇದನ್ನು ಓದಿ :– ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಅವ್ರನ್ನ ಹಿಡಿ, ಇವ್ರನ್ನ ಬಿಡಿ ಎನ್ನುವುದಕ್ಕೆ – ಅರಗ ಜ್ಞಾನೇಂದ್ರ