ಪ್ರಧಾನಿ ಕಾಶ್ಮೀರ ಭೇಟಿಗೆ ಪಾಕ್ ಕ್ಯಾತೆ- ಸಿಂಧೂ ಜಲ ಒಪ್ಪಂದದ ನೇರ ಉಲ್ಲಂಘನೆ ಎಂದು ಆರೋಪ

ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರ ಭೇಟಿ ವಿಚಾರವಾಗಿ ಪಾಕಿಸ್ತಾನ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಭೇಟಿಯನ್ನು ‘ಸಿಂಧೂ ಜಲ ಒಪ್ಪಂದದ “ನೇರ ಉಲ್ಲಂಘನೆ” ಎಂದು ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾಶ್ಮೀರ ಭೇಟಿ ಮತ್ತು ಚೆನಾಬ್ ನದಿಯಲ್ಲಿ ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿರುವದನ್ನು ಪಾಕಿಸ್ತಾನ ವಿರೋಧಿಸಿದೆ.

ಪ್ರಧಾನಿ ಮೋದಿ ನೇರವಾಗಿ ಗೋಡ್ಸೆ ಸಿದ್ಧಾಂತ ಬೆಂಬಲಿಸುತ್ತಿದ್ದಾರೆ: ತೆಲಂಗಾಣ ಸಚಿವ  ಕೆಟಿಆರ್- Kannada Prabha


2019 ರ ಆಗಸ್ಟ್ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪ್ರಧಾನಿ ಮೋದಿ ನಿನ್ನೆ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಯೋಜನೆಯಡಿಯಲ್ಲಿ ಕಿಶ್ತ್ವಾರ್ನ ಚೆನಾಬ್ ನದಿಯಲ್ಲಿ ಸುಮಾರು 5,300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ 850 MW ಸೌಲಭ್ಯ ಮತ್ತು 4,500 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅದೇ ನದಿಯಲ್ಲಿ 540 MW ಕ್ವಾರ್ ಜಲವಿದ್ಯುತ್ ಯೋಜನೆಗೆ ನಿರ್ಮಿಸಲಾಗುವುದು ಎನ್ನಲಾಗಿದೆ.

Narendra Modi the style king puts on the guru look | Financial Times


ಇದೀಗ ಪ್ರಧಾನಿ ಮೋದಿ ಅವರ ಈ ಭೇಟಿಯನ್ನು ವಿರೋಧಿಸಿರುವ ಪಾಕಿಸ್ತಾನ ಸರ್ಕಾರ, ಪ್ರಧಾನಿ ಮೋದಿಯವರ ಕಣಿವೆ ಭೇಟಿಯನ್ನು ಕಣಿವೆಯಲ್ಲಿ “ನಕಲಿ ಸಹಜತೆಯನ್ನು ತೋರಿಸಲು ಮತ್ತೊಂದು ತಂತ್ರ” ಎಂದು ಬಣ್ಣಿಸಿದೆ. ಈ ಕುರಿತು ಪಾಕ್ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ಕಾಶ್ಮೀರದಲ್ಲಿನ ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಭಾರತವು ಇಂತಹ ಹತಾಶ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದೆ.ಇದನ್ನೂ ಓದಿ :- ರಾಜ್ಯಪಾಲರ ಬದಲು ಸರ್ಕಾರದಿಂದಲೇ ವಿ.ವಿ.ಗಳಿಗೆ ಉಪ ಕುಲಪತಿಗಳ ನೇಮಕ- ತಮಿಳುನಾಡು ವಿಧಾನಸಭೆ ಅಂಗೀಕಾರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!