ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲಾಗಿರುವ ಘಟನೆ ರಾಯಚೂರು ತಾಲೂಕಿನ ಮಿರ್ಜಾಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇಂದೂ(14) ಮತ್ತು ಸುಜಾತ(13) ಮೃತ ದುರ್ದೈವಿಗಳು. ಕಾಲುವೆಯಲ್ಲಿ ನೀರು ಕಡಿಮೆ ಇದೇ ಎಂದು ತಿಳಿದು ನಾಲ್ಕು ಬಾಲಕಿಯರು ನೀರಿಗೆ ಇಳಿದಿದ್ದರು. ಆದರೆ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಈಜು ಬಾರದ ಹಿನ್ನೆಲೆ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ. ಇದನ್ನೂಓದಿ :- ಅಕ್ಷಯ ತೃತೀಯಾಗೆ ಚಿನ್ನ ಖರೀದಿಸಲು ಮುಗಿಬಿದ್ದ ಹೆಂಗಳೆಯರು
ಇನ್ನಿಬ್ಬರು ಬಾಲಕಿಯರು ಈಜಿ ದಡ ಸೇರಿದ್ದಾರೆ. ಬೇಸಿಗೆ ಹಿನ್ನೆಲೆ ಬಾಲಕಿಯರು ಈಜಾಡಲು ಹೋಗಿ ಮೃತಪಟ್ಟಿದ್ದಾರೆ. ಇದೀಗ ಮೃತ ದೇಹಗಳನ್ನು ಗ್ರಾಮಸ್ಥರು ಹೊರತೆಗೆದಿದ್ದಾರೆ. ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ :- ರಾಣಾ ದಂಪತಿಗೆ ಹಿನ್ನಡೆ – ಎಫ್ ಐ ಆರ್ ರದ್ದುಗೊಳಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿ ವಜಾ