ಬಾಲಿವುಡ್ ನಟ ಅಜಯ್ ದೇವಗನ್ ಮಾಡಿದ ಒಂದು ಟ್ವೀಟ್ ಇಡೀ ಭಾರತಾದ್ಯಂತ ಚರ್ಚೆ ಆಗುವಂತೆ ಮಾಡಿದೆ. ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ವಾರ್ ಬಗ್ಗೆಈಗಾಗಲೇ ಹಲವರು ಪ್ರತಿಕ್ರಿಯಿಸಿದ್ದಾರೆ. ರಾಜಕಾರಣಿಗಳು, ಸೆಲೆಬ್ರಿಟಿಗಳು, ಸಾಮಾನ್ಯ ಜನರು ಕೂಡ ಅಜಯ್ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
‘ಪಾನ್ ಮಸಾಲಾ’ ಜಾಹೀರಾತು ಪ್ರಚಾರ ಮಾಡುವ ಅಜಯ್ ದೇವ್ಗನ್ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟ ಸೋನು ಸೂದ್ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ಮನರಂಜನೆ ಭಾರತದ ಭಾಷೆ’ ಎಂದಿದ್ದಾರೆ.
“ಹಿಂದಿಯನ್ನು ರಾಷ್ಟ್ರ ಭಾಷೆ ಎನ್ನುವುದನ್ನು ನಾನು ಒಪ್ಪಲಾರೆ. ಭಾರತಕ್ಕೆ ಇರುವುದು ಒಂದೇ ಭಾಷೆ, ಅದು ಮನರಂಜನೆ. ನಾವು ಯಾವ ಚಿತ್ರರಂಗಕ್ಕೆ ಸಂಬಂಧಪಡುತ್ತೇವೆ ಎನ್ನುವುದು ಸಂಬಂಧಿಸುವುದಿಲ್ಲ. ನಾವು ಜನರನ್ನು ಮನರಂಜಿಸಿದರೆ, ಅವರು ನಮ್ಮನ್ನು ಪ್ರೀತಿಸುತ್ತಾರೆ, ಗೌರವ ನೀಡುತ್ತಾರೆ, ನಮ್ಮನ್ನು ಒಪ್ಪಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ :- ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕಿದೆ – ಸಿದ್ದರಾಮಯ್