ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರ ಒಕ್ಕೂಟ ವ್ಯವಸ್ಥೆ ಸಹಕಾರಿಯಾಗಿಲ್ಲ, ಅದು ದಬ್ಬಾಳಿಕೆಯಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಎಲ್ಲಾ ತೈಲ ತೆರಿಗೆಗಳಲ್ಲಿ ಶೇಕಡಾ 68 ರಷ್ಟು ತೆಗೆದುಕೊಂಡಿದ್ದರೂ ತೈಲ ಬೆಲೆ ಹೆಚ್ಚಳಕ್ಕೆ ರಾಜ್ಯಗಳನ್ನು ದೂಷಿಸುವ ಮೂಲಕ ತಮ್ಮ ಹೊಣೆಗಾರಿಕೆಯಿಂದ ಪ್ರಧಾನಿ ನುಣಿಚಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ತೈಲ ದರ ಹೆಚ್ಚಳ, ರಾಜ್ಯಗಳ ದೂಷಣೆ, ಕಲ್ಲಿದ್ದಲು ಕೊರತೆ- ರಾಜ್ಯಗಳು ದೂಷಣೆ, ಆಕ್ಸಿಜನ್ ಕೊರತೆ-ರಾಜ್ಯಗಳ ದೂಷಣೆ ಎಂದು ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಹೇಳಿದ್ದಾರೆ. ಒಕ್ಕೂಟ ವ್ಯವಸ್ಥೆ ಸಹಕಾರಿಯಾಗಿಲ್ಲ, ಅದು ದಬ್ಬಾಳಿಕೆಯಾಗಿದೆ ಎಂದು ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ :- ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕಿದೆ – ಸಿದ್ದರಾಮಯ್