ಬಿಜೆಪಿ ನಾಯಕರಿಗೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲು ಹೊಸ ಅಸ್ತ್ರ ಸಿಕ್ಕಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತ ವಿಡಿಯೊ, ಫೋಟೋ ಇಂದು ಬೆಳಗ್ಗೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ರಾಹುಲ್ ಗಾಂಧಿ ನೈಟ್ ಕ್ಲಬ್ ನಲ್ಲಿ (Night club) ಸಂತೋಷ ಕೂಟದಲ್ಲಿ ಭಾಗಿಯಾಗಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಡಿಸ್ಕೊಥೆಕ್ ಕಾಣಿಸಿಕೊಂಡಿದ್ದು, ರಾಹುಲ್ ಗಾಂಧಿಯ ಸುತ್ತಮುತ್ತ ಇರುವವರು ಮದ್ಯ ಸೇವಿಸುತ್ತಿದ್ದಾರೆ.ಇದನ್ನು ಓದಿ:-ದಾವಣಗೆರೆಯಲ್ಲಿ ಎತ್ತುಗಳೊಂದಿಗೆ ಪೋಸ್ ನೀಡಿದ ರೇಣುಕಾಚಾರ್ಯ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕುರಿತು ತೀವ್ರ ಬಿಕ್ಕಟ್ಟು, ಭಿನ್ನಾಭಿಪ್ರಾಯ ಎದುರಾಗಿರುವ ಹೊತ್ತಿನಲ್ಲಿ ಈ ವಿಡಿಯೊ ಹೊರಬಂದಿದೆ. ಚುನಾವಣಾ ಕಾರ್ಯತಂತ್ರ ಪ್ರಶಾಂತ್ ಕಿಶೋರ್ ಅವರಿಂದ ಕಾರ್ಯತಂತ್ರ ರೂಪಿಸಿ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ.
ಕಠ್ಮಂಡುವಿನಲ್ಲಿ ಸ್ನೇಹಿತನೊಬ್ಬನ ಮದುವೆಯಲ್ಲಿ ರಾಹುಲ್ ಗಾಂಧಿ ಸೋಮವಾರ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಿ ಮದುವೆ ನಂತರ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ. ಇದು ಬಿಜೆಪಿ ನಾಯಕರ ಬಾಯಿಗೆ ಆಹಾರವಾಗಿದೆ.
ಇದನ್ನು ಓದಿ:-ನಾಯಕತ್ವ ಬದಲಾವಣೆ ಬಗ್ಗೆ ಮಾತಾಡೋರಗೆ ಕಟೀಲ್ ಎಚ್ಚರಿಕೆ.!