ಆನ್ಲೈನ್ ಗೇಮಿಂಗ್, ರೇಸ್ಗಳು ಮತ್ತು ಕ್ಯಾಸಿನೊಗಳ ಮೇಲಿನ ತೆರಿಗೆಯನ್ನು ಪರಿಶೀಲಿಸಲು ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಕೌನ್ಸಿಲ್ನಿಂದ ನಿಯೋಜಿತರಾಗಿರುವ ಸಚಿವರ ತಂಡ (ಜಿಒಎಂ) ಶೇ. 28ರಷ್ಟು ತೆರಿಗೆ ವಿಧಿಸಲು ಸೂಚಿಸುವ ಸಾಧ್ಯತೆಯಿದೆ.
ಈ ಮೂಲಕ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನಿಷೇಧಕ್ಕೊಳಗಾಗಿ ಆರಂಭಿಕ ಹಿನ್ನೆಡೆ ಅನುಭವಿಸಿದ್ದ ಆನ್ಲೈನ್ ಗೇಮಿಂಗ್ಗಳು ಇದೀಗ ಎರಡನೇ ಸವಾಲು ಎದುರಿಸುತ್ತಿವೆ. ದರದ ಕುರಿತು ಅಂತಿಮ ಶಿಫಾರಸು, ಹಾಗೆಯೇ ತೆರಿಗೆಯನ್ನು ಒಟ್ಟು ಗೇಮಿಂಗ್ ಆದಾಯ ಅಥವಾ ಪ್ರತಿ ವಹಿವಾಟಿನ ಮೇಲೆ ಹಾಕಬೇಕೇ ಎಂಬುದರ ಕುರಿತು ಮುಂದಿನ ವಾರ ಸಚಿವರುಗಳ ಭೇಟಿಯಾದಾಗ ನಿರ್ಧರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ನೇತೃತ್ವದ ಸಚಿವರ ತಂಡವು ಸೋಮವಾರ ಭೇಟಿಯಾಗಿ ಕ್ಯಾಸಿನೊಗಳು ಮತ್ತು ಆನ್ಲೈನ್ ಗೇಮಿಂಗ್ ಸೇವೆ ಒದಗಿಸುವ ಕಂಪನಿಗಳ ಮೌಲ್ಯಮಾಪನದ ಬಗ್ಗೆ ಚರ್ಚೆ ನಡೆಸಿದೆ.
“ಶೇ. 28ರಷ್ಟು ತೆರಿಗೆ ದರವನ್ನು ವಿಧಿಸುವ ಬಗ್ಗೆ ಒಮ್ಮತವಿದ್ದರೂ ಒಟ್ಟಾರೆ ಗೇಮಿಂಗ್ ಆದಾಯದ ಮೇಲೆ ವಿಧಿಸಬೇಕೇ ಅಥವಾ ಪ್ರತಿವಹಿವಾಟಿನ ಆಧಾರದ ಮೇಲೆ ತರಿಗೆ ವಿಧಿಸಬೇಕೇ ಎಂಬುದರ ಬಗ್ಗೆ ಇನ್ನೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಇದನ್ನೂ ಓದಿ :- ಕಠ್ಮಂಡು ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ – ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್
ಪ್ರಸ್ತುತ ಬೆಟ್ಟಿಂಗ್ ಅಥವಾ ಜೂಜಾಟವನ್ನು ಒಳಗೊಂಡಿರುವ ಆನ್ಲೈನ್ ಆಟಗಳ ಮೇಲೆ ಶೇ. 28ರ ದರದಲ್ಲಿ ಜಿಎಸ್ಟಿ ವಿಧಿಸಲಾಗುತ್ತಿದೆ. ಬೆಟ್ಟಿಂಗ್ ಅಥವಾ ಜೂಜಾಟವನ್ನು ಒಳಗೊಂಡಿರದ ಆಟಗಳಿಗೆ ಇದು ಶೇ. 18ರಷ್ಟಿದೆ. ಪ್ರತಿ ಆಟಕ್ಕೆ ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ಗಳು ಸಂಗ್ರಹಿಸುವ ಕಮಿಷನ್ನ ಮೇಲೆ ಶೇ. 18ರಷ್ಟು ತೆರಿಗೆ ದರವನ್ನು ವಿಧಿಸಲಾಗುತ್ತಿದೆ. ಕುದುರೆ ರೇಸಿಂಗ್ನಲ್ಲಿ ಒಟ್ಟು ಬೆಟ್ ಮಾಡಿದ ಮೌಲ್ಯದ ಮೇಲೆ ಶೇ. 28ರಷ್ಟು ಜಿಎಸ್ಟಿ ವಿಧಿಸುತ್ತಾ ಬರಲಾಗಿದೆ.
ಇದನ್ನೂ ಓದಿ :- ಮಾಜಿ ಪತ್ನಿಯನ್ನೇ ಮತ್ತೊಮ್ಮೆ ಮದ್ವೆ ಆಗ್ತೀನಿ ಎಂದ ಬಿಲ್ ಗೇಟ್ಸ್