PSI ನೇಮಕಾತಿ ಅಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಎನ್. ಅಶ್ವಥ್ ನಾರಾಯಣ್ ಸೋದರ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸಚಿವ ಡಾ.ಅಶ್ವತ್ಥ್ ನಾರಾಯಣ್ ಕಚೇರಿಗೆ NSUI ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು.
ಸಚಿವರ ಕಚೇರಿ ಬಳಿ ಬ್ರೀಫ್ ಕೇಸ್ ನಿಂದ ಹಣ ತೆಗೆದು ಎಸೆಯುವ ಅಣಕು ಪ್ರತಿಭಟನೆ ನಡೆಸಿದ್ರು. ಪ್ರತಿಭಟನಾನಿರತ NSUI ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. 40 ಪರ್ಸೆಂಟ್ ಸರ್ಕಾರಕ್ಕೆ ಧಿಕ್ಕಾರ, ನ್ಯಾಯ ಬೇಕು, ಉನ್ನತ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು. ಇದನ್ನೂ ಓದಿ :- ರಾಜಕೀಯದಲ್ಲಿ ಧರ್ಮ ಉಳಿಯಲಿ, ಆದರೇ ಧರ್ಮದಲ್ಲಿ ರಾಜಕೀಯ ಬೇಡ – ಶ್ರೀಕರಿವೃಷಭ ದೇಶೀಕೇಂದ್ರ ಸ್ವಾಮೀಜಿ
ಇನ್ನೊಂದೆಡೆ ಡಾ ಸಿ ಎನ್ ಅಶ್ವಥ್ ನಾರಾಯಣ ಅವರ ಮಲ್ಲೇಶ್ವರದ 13ನೇ ಕ್ರಾಸ್ ನ ನಿವಾಸ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಇಂದು ಸಾಲು ಸಾಲು ಪ್ರತಿಭಟನೆಗಳಿವೆ. ಪರೀಕ್ಷೆಯಲ್ಲಿ ಅಕ್ರಮ ಖಂಡಿಸಿ ಕಾಂಗ್ರೆಸ್ ನಾಯಕರು, ಅಭ್ಯರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ನ್ಯಾಯವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಸರ್ಕಾರ ಪರೀಕ್ಷಾ ಪ್ರಕ್ರಿಯೆ ರದ್ದು ಮಾಡಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಮತ್ತು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ :- ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವ ಆಗಲ್ಲ – ಶ್ರೀ ರಾಮುಲು