ಡಿ.ಕೆ.ಶಿವಕುಮಾರ್ ಏನೇ ಮಾಡಿದ್ರೂ ಅಂಜುವ ಮಗ ನಾನಲ್ಲ – ಬಸನಗೌಡ ಪಾಟೀಲ್ ಯತ್ನಾಳ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏನೇ ಮಾಡಿದರೂ ಅಂಜುವ ಮಗ ನಾನಲ್ಲ. ನಾನು ಅಂಜಿ ರಾಜಕಾರಣ ಮಾಡಲ್ಲ. ಡಿಕೆಶಿಗೆ ನನ್ನ ಭಯ ಹುಟ್ಟಿದೆ.

Government tried to infect me with Covid, says Shivakumar | Deccan Herald

ಕರ್ನಾಟಕದಲ್ಲಿ ರಾಜಕೀಯ ಭವಿಷ್ಯ ಮುಗಿಯುತ್ತದೆ ಎನ್ನುವ ಭಯ ಶುರುವಾಗಿದೆ ಎಂದು ಡಿಕೆಶಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸಿಎಂ ಆಗಲು ಹೈಕಮಾಂಡ್ ಹಣ ನೀಡಬೇಕಾಗುತ್ತದೆ ಎಂದು ನಾನು ಹೇಳಿಲ್ಲ. ನಾನು ಹೇಳಿದ ಅರ್ಥ ಬೇರೆ ಇದೆ. ಸಿಎಂ ಮಾಡುತ್ತೇವೆ ಎಂದು ಯಾರೋ ವಾಟ್ಸಪ್ ಕಾಲ್ ಮಾಡುತ್ತಾರೆ. ಇದನ್ನೂಓದಿ :- ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಿ.ಟಿ ರವಿ

ನಮಗೆ ಮೋದಿ ಗೊತ್ತು, ಸೋನಿಯಾ ಗಾಂಧಿ ಗೊತ್ತು, ದೇವೇಗೌಡ್ರು ಗೊತ್ತು ಎಂದು ಹೇಳುತ್ತಾರೆ. ವ್ಯವಸ್ಥೆ ಹಾಗಿದೆ. ಅವರನ್ನು ನಂಬಬೇಡಿ ಎಂದು ಹೇಳಿದ್ದೇನೆ ಎಂದು ಉಲ್ಟಾ ಹೊಡೆದಿದ್ದಾರೆ. ನಮಗೆ ಕಾಲ್ ಮಾಡಿ ಸೋನಿಯಾ ಗಾಂಧಿ ಭೇಟಿ ಮಾಡಿಸುತ್ತೇನೆ ಎಂದಿದ್ದಾರೆ. ಇಂತಹವರು ದೇಶದಲ್ಲಿದ್ದಾರೆ, ರಾಜ್ಯದಲ್ಲಿದ್ದಾರೆ, ಬೆಂಗಳೂರಲ್ಲಿಯೂ ಇದ್ದಾರೆ. ನಿಮ್ಮ ಸಿಎಂ ಸೀಟ್ ಗಾಗಿ ನಾವು ಟ್ರೈ ಮಾಡುತ್ತೇವೆ.

Karnataka Congress chief DK Shivakumar booked for violating COVID-19 norms  during 'Mekedatu Padayatra' | India News | Zee News

ಇಷ್ಟು ಸಾವಿರ ಕೋಟಿ ರೆಡಿ ಇಡಿ ಎಂದು ಅವರು ನನಗೆ ಹೇಳಿದ್ದರು ಎಂದರು. ಹೈಕಮಾಂಡ್ ಹಣ ಕೇಳಿದೆ ಎಂದು ನಾನು ಹೇಳಿಲ್ಲ. ಪ್ರಧಾನಿ ಮೋದಿ ಕಾಲದಲ್ಲಿ ಇಂಥದ್ದೆಲ್ಲಾ ಸಾಧ್ಯವಿಲ್ಲ. ಮೋದಿ ಪ್ರಧಾನಿಯಾಗಿ ಇರುವವರೆಗೂ ಸಿಎಂ ಸೀಟಿಗಾಗಿ ಹಣ ಕೇಳುವಂತದ್ದು ನಡೆಯೋದೇ ಇಲ್ಲ ಎಂದು ಹೇಳಿದರು.

ಇದನ್ನೂಓದಿ :- CID ನೋಟಿಸ್ ಗೆ ಕಡೆಗೂ ಉತ್ತರ ಕೊಟ್ಟ ಪ್ರಿಯಾಂಕ ಖರ್ಗೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!