ರಾಜ್ಯ ಕಾಂಗ್ರೆಸ್ನಲ್ಲಿ ಭುಗಿಲೆದ್ದಿರುವ ಆಂತರಿಕ ಅಸಮಾಧಾನ ರಾಷ್ಟ್ರ ನಾಯಕರನ್ನು ತಲುಪುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್(D.K. SHIVKUMAR ) ವಿರುದ್ಧ ಸಿಡಿದೆದ್ದಿರುವ ರಮ್ಯಾ,(RAMYA ) ಸಾಲು ಸಾಲು ಟ್ವೀಟ್ಗಳ ಮೂಲಕ ಸಿಡಿದೆದ್ದಿದ್ದಾರೆ. ಪಕ್ಷದ ರಾಜ್ಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಾವು ಪಕ್ಷದ ಜವಾಬ್ದಾರಿಗಳನ್ನು ತ್ಯಜಿಸಿದ ಬಳಿಕ ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಯಿತು ಎಂದು ರಮ್ಯಾ ಆರೋಪಿಸಿದ್ದಾರೆ. ”ನಾನು ರಾಜೀನಾಮೆ ನೀಡಿದ ಬಳಿಕ, ‘ಆಕೆ ಕಾಂಗ್ರೆಸ್ಗೆ 8 ಕೋಟಿ ರೂ ವಂಚಿಸಿ ಪರಾರಿಯಾಗಿದ್ದಾಳೆ’ ಎಂಬ ಸುದ್ದಿಯನ್ನು ಸೃಷ್ಟಿಸಲಾಯಿತು. ಮುಖ್ಯವಾಗಿ ನನ್ನ ವಿಶ್ವಾಸಾರ್ಹತೆಯನ್ನು ನಾಶಪಡಿಸುವ ಪ್ರಯತ್ನವಾಗಿ ಕನ್ನಡ ಸುದ್ದಿ ವಾಹಿನಿಗಳಲ್ಲಿ ಬಿತ್ತಿದ ಸುದ್ದಿಯಿದು. ನಾನು ಓಡಿ ಹೋಗಿರಲಿಲ್ಲ. ನಾನು ನನ್ನ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದೆ. ನಾನು ನಿಜಕ್ಕೂ ಪಕ್ಷಕ್ಕೆ ಎಂಟು ಕೋಟಿ ರೂ ವಂಚನೆ ಮಾಡಿಲ್ಲ. ನಾನು ಮಾಡಿದ ತಪ್ಪು ಎಂದರೆ ಮೌನವಾಗಿ ಇದ್ದದ್ದು” ಎಂದು ನಟಿ, ರಾಜಕಾರಣಿ ರಮ್ಯಾ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ರಮ್ಯಾ ಅವರ ಕುರಿತು ಅನೇಕ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಟ್ರೋಲ್ ಮಾಡುವಂತೆ ಪಕ್ಷದ ನಾಯಕರೇ ಸೂಚನೆ ನೀಡಿದ್ದಾರೆ ಎಂಬ ವಿಚಾರದಲ್ಲಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ರಕ್ಷಣೆ ಕೋರಿದ್ದಾರೆ. ಇದನ್ನೂ ಓದಿ : – ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯೋದಕ್ಕೂ ಶಿಕ್ಷಣ ಇಲಾಖೆಯಲ್ಲಿ ನಡೆಯೋದಕ್ಕು ವ್ಯತ್ಯಾಸ ಇದೆ – ಬಸವರಾಜ್ ರಾಯರೆಡ್ಡಿ
“ಕೆಸಿ ವೇಣುಗೋಪಾಲ್ ಅವರಿಗೆ ನನ್ನ ವಿನಮ್ರ ಮನವಿ, ನೀವು ಮುಂದಿನ ಬಾರಿ ಕರ್ನಾಟಕಕ್ಕೆ ಯಾವಾಗ ಬರುತ್ತೀರೋ ಆಗ ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ. ವೇಣುಗೋಪಾಲ್ ಅವರೇ, ನೀವು ನನಗಾಗಿ ಮಾಡಬಹುದಾದ ಕನಿಷ್ಠ ಸಂಗತಿ ಇದು. ಇದರಿಂದ ನಾನು ಈ ನಿಂದನೆ ಮತ್ತು ಟ್ರೋಲ್ಗಳೊಂದಿಗೆ ನನ್ನ ಉಳಿದ ಜೀವನವನ್ನು ಬದುಕುವ ಸ್ಥಿತಿ ಇರುವುದಿಲ್ಲ” ಎಂದು ಹೇಳಿದ್ದಾರೆ. ಇದನ್ನೂ ಓದಿ :- ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿ, ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ- ಸಿಎಂ ಬೊಮ್ಮಾಯಿ