ಪಿಎಸ್ ಐ ನೇಮಕಾತಿ ಅಕ್ರಮ ಕುರಿತಂತೆ ಡಿವೈಎಸ್ಪಿ ಶಾಂತಕುಮಾರ್ ಬಂಧನವಾಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವಿಚಾರಣೆ ನಡೀತಿದೆ, ಸೂಕ್ತ ಸಾಕ್ಷ್ಯ ಗಳು ಸಿಕ್ಕಿದ್ರೆ ಅರೆಸ್ಟ್ ಮಾಡ್ತಿವಿ ಎಂದು ಹೇಳಿದ್ದಾರೆ.
ಈ ಹಿಂದೆ ಅರೆಸ್ಟ್ ಆಗಿದ್ದ ಸಿಬ್ಬಂದಿ ವಿಚಾರಣೆಯಲ್ಲಿ ಕೆಲವೊಂದು ಮಾಹಿತಿಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ಶಾಂತಕುಮಾರ್ ರನ್ನು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ : – ಕೇದಾರನಾಥಕ್ಕೆ ಹರಿದು ಬಂದ ಜನಸಾಗರ – ಇದುವರೆಗೆ 28 ಮಂದಿ ಸಾವು
ಎಗ್ಸಾಂ ನ ಪ್ರತಿಯೊಂದು ಸೆಂಟರ್ ನಲ್ಲೂ ಪೊಲೀಸರು ಕೆಲಸ ಮಾಡಿದ್ರು. ಹಾಗಾಗಿ ಅಲ್ಲಿ ಯಾರೆಲ್ಲಾ ಕೆಲಸ ಮಾಡಿದ್ರು, ಅವರನ್ನೆಲ್ಲಾ ಕರೆದು ವಿಚಾರಣೆ ಮಾಡಲಾಗುತ್ತಿದೆ. ಸಿಐಡಿ ತುಂಬಾ ಒಳ್ಳೆ ಕೆಲಸ ಮಾಡಿದೆ. ತಪ್ಪಿತಸ್ಥರು ಯಾರೆ ಇದ್ರೂ ಬಿಡಲ್ಲ ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : – ಕ್ಷಣಾರ್ಧದಲ್ಲಿಯೇ ಪ್ರಾಣಾಪಾಯದಿಂದ ಪಾರಾದ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ