ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯ ಹುಂಡಿ ಎಣಿಕೆ ಕಾರ್ಯ ನಡೆಯಿತು. ಕೇವಲ 34 ದಿನಗಳಲ್ಲಿ ದಾಖಲೆಯ 2.57 ಕೋಟಿ ರೂ.ಸಂಗ್ರಹವಾಗಿದೆ.
ಸಾಲೂರು ಬೃಹನ್ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳ ಎಣಿಕೆ ಕಾರ್ಯ ನಡೆಯಿತು. ಸಿಸಿ ಕ್ಯಾಮರಾ ಕಣ್ಗಾವಲು ಹಾಗೂ ಪೊಲೀಸ್ ಬಂದೋಬಸ್ತ್ ನಲ್ಲಿ ಎಣಿಕೆ ಕಾರ್ಯ ನಡೆಯಿತು. ಕೇವಲ 34 ದಿನಗಳಲ್ಲಿ 2,57,25,859 ನಗದು ,127 ಗ್ರಾಂ ಚಿನ್ನ, 3,447 ಗ್ರಾಂ ಬೆಳ್ಳಿ ಸಂಗ್ರಹ ಮಾಡಲಾಗಿದೆ. ಇದನ್ನೂ ಓದಿ : – ವಿಧಾನ ಪರಿಷತ್ತಿನ ಏಳು ಸ್ಥಾನಗಳಲ್ಲಿ ಬಿಜೆಪಿ ಶಾಸಕರಿಗೆ ನಾಲ್ಕು ಸ್ಥಾನಗಳು
ಹರಕೆಯ ರೂಪದಲ್ಲಿ ಭಕ್ತರು ನಗದು ಮತ್ತು ಚಿನ್ನಾಭರಣಗಳನ್ನು ದಾಖಲೆ ಪ್ರಮಾಣದಲ್ಲಿ ಸಲ್ಲಿಕೆಯಾಗಿದೆ. ನಿತ್ಯದ ವಿವಿಧ ಸೇವೆಗಳನ್ನು ಹೊರತುಪಡಿಸಿ ಹುಂಡಿಯಲ್ಲೇ ಎರಡೂವರೆ ಕೋಟಿ ರೂಪಾಯಿ ದಾಖಲೆ ಸಂಗ್ರಹವಾಗಿದೆ. ಇದನ್ನೂಓದಿ : – ರಮ್ಯಾ ಪಕ್ಷ ಬಿಟ್ಟು ಹೋಗಿಲ್ಲ, ಯಾವಾಗ ಬೇಕಾದ್ರೂ ಸಂಘಟನೆಗೆ ಬರಬಹುದು – ಎಂಎಲ್ಸಿ ರಾಜೇಂದ್ರ