ವಿಜಯನಗರ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಅಮೃತಾ, 625/625 ಅಂಕ ಪಡೆದಿದ್ದಾಳೆ.
ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುರುದೇವ ಇಂಗ್ಲಿಷ್ ಮೀಡಿಯಂ ಶಾಲೆಯ ಇಬ್ಬರು ವಿದ್ಯಾರ್ಥಿನಿಯರಾದ ಕವನಾ ಹಾಗೂ ವಿದ್ಯಾ ಶ್ರೀ ಕೂಡಾ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಗೋಕಾಕ್ ನ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ದಾಮಿನಿ ಹನುಮಂತ ಚುಂಚನೂರು 625 ಅಂಕಗಳಿಗೆ 619 ಅಂಕ ಪಡೆದು ಉತೀರ್ಣರಾಗಿದ್ದಾರೆ.
ಹಾವೇರಿಯ ಸವಣೂರು ತಾಲೂಕಿನ ಹಳೆ ಮನ್ನಂಗಿ ಗ್ರಾಮದ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ . ಹಳೆ ಮನ್ನಂಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯಾದ ಪ್ರವೀಣ್ ಬಸನಗೌಡ ನೀರಲಗಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದಿರುವ ವಿದ್ಯಾರ್ಥಿ . ಸುಮಾರು 625 ಕ್ಕೆ 625 ಮಾರ್ಕ್ಸ್ ತೆಗೆದು ಉರ್ತೀಣನಾಗಿದ್ದಾನೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಡು ಸರ್ಕಾರಿ ಫ್ರೌಡಶಾಲೆ ವಿದ್ಯಾರ್ಥಿನಿ ಭೂಮಿಕ 625 ಕ್ಕೆ 625 ಅಂಕ ಗಳಿಸಿದ್ದಾಳೆ.
ಕೊಪ್ಪ ತಾಲೂಕಿನ ಸಕ್ರೆಬೈಲು ಮೂಲದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾದ ಆಕೃತಿ 625 / 625 ಅಂಕಗಳನ್ನು ಗಳಿಸಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಪೂರ್ಣ ಪ್ರಜ್ಞಾ ಶಾಲೆಯ ಚರಿತ ಎಮ್ ಗೌಡ 625 / 625 ತೆಗೆದು ಉತ್ತಿರ್ಣರಾಗಿದ್ದಾರೆ . ಬಾಗಲಕೋಟೆ ಜಿಲ್ಲೆಯ ರಾಂಪುರ ಗ್ರಾಮದ .
ರಾಮಪುರ ನಗರದ ಪೂರ್ಣಪ್ರಜ್ಞೆ ಆಂಗ್ಲ ಮಾದ್ಯಮ ಹೈಸ್ಕೂಲ್ ವಿದ್ಯಾರ್ಥಿನಿಯಾದ ಸೌಮ್ಯಾ ಅಮ್ಮಲಜರಿ 625 ಕ್ಕೆ 624 ಅಂಕ ಪಡೆದು ಪಾಸ್ ಆಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿದ್ಯಾರ್ಥಿನಿ ಜಿ ಚೇತನ 625 ಕ್ಕೆ 625 ಅಂಕ ಪಡೆದಿದ್ದಾಳೆ .ವಿಜಯಪುರ ಜಿಲ್ಲೆಯ ಆರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ಅಮಿತ್ ಮಾದರ.
ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಇಂಗ್ಲೀಷ್ ಮಾಧ್ಯಮದ ಐಶ್ವರ್ಯ ಈರಣ್ಣ ಕನಸೆ, ಸಿಂದಗಿ ತಾಲೂಕಿನ ವಿಭೂತಿಹಾಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸ್ವಾತಿ ಗೌಡಪ್ಪ ಮಲ್ಲೇದ ವಿಜಯಪುರ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ರಕ್ಷಿತಾ ಸುರೇಶ ಚಿನಿವಾರ, ತಾಳಿಕೋಟೆ ಪಟ್ಟಣದ ಸರ್ವಜ್ಞ ವಿದ್ಯಾಪೀಠ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ಶ್ರೇಯಾ ದೇಸಾಯಿ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ್ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ಯಲ್ಲಾಲಿಂಗ ಬಸಪ್ಪ ಸುಳಿಭಾವಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ:– 45 ವಿದ್ಯಾರ್ಥಿಗಳಿಗೆ 625 ಅಂಕ 3,920 ಶಾಲೆಗಳಲ್ಲಿ ಶೇ.100, 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ