ರಾಜಧಾನಿ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ( BASAVARAJ BOMMAI ) ಇಂದು ಕೂಡ ಸಿಟಿ ರೌಂಡ್ಸ್ ನಡೆಸಿದ್ರು. ಕಾವೇರಿನಗರದ ಸಾಯಿ ಲೇಔಟ್ನಲ್ಲಿ ರಾಜಕಾಲುವೆಯ ಕಾಮಗಾರಿಯನ್ನು ಸಿಎಂ ಪರಿಶೀಲಿಸಿದ್ರು .
ರಾಜಕಾಲುವೆಯ ನೀಲಿನಕ್ಷೆ ತರಿಸಿಕೊಂಡು ಮಳೆಯಿಂದ ಹಾನಿಗೊಳಗಾದ ಕಾಲುವೆ ವೀಕ್ಷಿಸಿದ ಸಿಎಂ ಮತ್ತೆ ಅದೇ ಚಾಳಿ ಮುಂದುವರೆಸಿದ್ರು . ಕಾಮನ್ ಮ್ಯಾನ್ಗಳ ಸಮಸ್ಯೆಯನ್ನೆ ಕೇಳದ ಸಿಎಂ ಕೇವಲ 5 ನಿಮಿಷಗಳ ಕಾಲ ಸ್ಥಳ ಪರಿಶೀಲಿಸಿ ತೆರಳಿದರು. ಸ್ಥಳೀಯರ ಅಹವಾಲು ಕೇಳದೆ ಸಿಎಂ ಬೊಮ್ಮಾಯಿ ಹೊರಟು ಹೋದರು, ಸಿಎಂ ಬಳಿ ಮನವಿ ಮಾಡಲು ಸ್ಥಳೀಯರು ಕಾದು ಕುಳಿತಿದ್ದರು . ಸಿಎಂ ವೀಕ್ಷಣೆ ಮಾಡುವ ಜಾಗದ ಸುತ್ತಲೂ ಬ್ಯಾರಿಕೇಡ್ ಹಾಕಿ ಸ್ಥಳೀಯರಿಗೆ ಪೋಲಿಸರು ನಿರ್ಬಂಧಿಸಿದ್ರು. ಇದನ್ನೂ ಓದಿ :- ಜೂನ್ 3ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ – ಬಿ.ಸಿ ನಾಗೇಶ್ ಟ್ವೀಟ್
ಮಳೆ ನಿರ್ವಹಣೆಗೆ ಟಾಸ್ಕ್ ಫೋರ್ಸ್
ಬೆಂಗಳೂರಿನ ಅಷ್ಟ ದಿಕ್ಕುಗಳಿಗೂ ಸಚಿವರನ್ನು ನೇಮಿಸಲಿರುವ ಸಿಎಂ ಬೊಮ್ಮಾಯಿ. ಪ್ರತಿ ಝೋನ್ನಲ್ಲೂ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳನ್ನೊಳಗೊಂಡ ಟಾಸ್ಕ್ಫೋರ್ಸ್ ರಚಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ಕಾಮಗಾರಿ ಪರಿಶೀಲನೆ, ತುರ್ತು ಸಂದರ್ಭದಲ್ಲಿ ಝೋನ್ ಉಸ್ತುವಾರಿ ನೋಡಿಕೊಳ್ಳಲಿರುವ ಪಟ್ಟಿಯನ್ನು ಸಿಎಂ ಬೊಮ್ಮಾಯಿ ಬಿಡುಗಡೆ ಮಾಡಲಿದ್ದಾರೆ.
ಅಧಿಕಾರಿಗಳು ಕಕ್ಕಾಬಿಕ್ಕಿ
ಪೈ ಲೇಔಟ್ನಿಂದ ಬೊಮ್ಮಾಯಿ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನೇರವಾಗಿ ಕಗ್ಗಲಿಪುರದತ್ತ ಪ್ರಯಾಣ ಬೆಳೆಸಿದ್ದಾರೆ. ಸಿಎಂ ದಿಢೀರ್ ನಿರ್ಧಾರದಿಂದ ಮಳೆ ರೌಂಡ್ಸ್ಗೆ ಬಂದ ಕೆಲ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಕೆಲ ಅಧಿಕಾರಿಗಳು ಮೈಸೂರು ರೋಡ್ ನಿಂದ ವಾಪಸ್ ಆಗಿದ್ದಾರೆ. ಇದನ್ನೂ ಓದಿ : – ನಾರಾಯಣಗುರು ಪಠ್ಯ ಕೈಬಿಡುವ ಪ್ರಶ್ನೆಯೇ ಇಲ್ಲ – ಕೋಟ ಶ್ರೀನಿವಾಸನ್ ಪೂಜಾರಿ