ಸೌತ್ ಸಿನಿರಂಗದ ಮುದ್ದಾದ ಜೋಡಿಗಳಲ್ಲಿ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಶೆಟ್ಟಿ ಕೂಡ ಒಬ್ಬರು. ಇತ್ತೀಚೆಗಷ್ಟೇ ಪ್ರೀತಿಸಿ ಹಸೆಮಣೆ ಏರಿರುವ ಈ ಜೋಡಿಗೆ ಹಾರೈಸಲು ಇಡೀ ಚಿತ್ರರಂಗವೇ ಭಾಗಿಯಾಗಿತ್ತು.
ಈ ವರ್ಷದ ಶುರುವಿನಲ್ಲಿಯೇ ಅಧಿಕೃತವಾಗಿ ನಿಕ್ಕಿ ಮತ್ತು ಆದಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮೇ 18ರಂದು ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ವಿವಾಹವಾಯಿತು.
ಇದೇ ದಿನ ಅಕ್ಕ ಸಂಜನಾ ಕೂಡ ಗಂಡು ಮಗುವಿಗೆ ತಾಯಿಯಾದರು. ಗಲ್ರಾನಿ ಕುಟುಂಬದಿಂದ ಡಬಲ್ ಗುಡ್ ನ್ಯೂಸ್ ಸಿಕ್ಕಿತ್ತು. ಇದನ್ನೂ ಓದಿ :- ಪತಿ ಜೊತೆ ಫೋಟೋಶೂಟ್ ನಲ್ಲಿ ಮಿಂಚಿದ ಪ್ರಣಿತಾ
ಇದೀಗ ಇಡೀ ಚಿತ್ರರಂಗವೇ ನಿಕ್ಕಿ ಗಲ್ರಾನಿ- ಆದಿ ಪಿನಿಸೆಟ್ಟಿ ಜೋಡಿಯ ಅದ್ದೂರಿ ಆರತಕ್ಷತೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭಹಾರೈದ್ದಾರೆ. ಚಿತ್ರರಂಗದ ದಿಗ್ಗಜರು ಭಾಗಿಯಾಗಿ ಜೋಡಿಗೆ ವಿಶ್ ಮಾಡಿದ್ದಾರೆ.
ಇದನ್ನೂ ಓದಿ :- ನಟ ಆದಿ ಪಿನಿಶೆಟ್ಟಿ ಜೊತೆ ಸಪ್ತಪದಿ ತುಳಿದ ನಟಿ ನಿಕ್ಕಿ ಗಲ್ರಾನಿ