ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡದ್ದಕ್ಕೆ ಬಿಜೆಪಿ (BJP) ರಾಜ್ಯ ಉಪಾದ್ಯಕ್ಷ ವಿಜಯೇಂದ್ರ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಎಲ್ಲಾ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ನಾಯಕ ಯಡಿಯೂರಪ್ಪ. ಒಬ್ಬ ಬಡವರ ಮನೆ ಬಾಗಿಲಿಗೆ 108 ಆಂಬುಲೆನ್ಸ್ ಹೋಗಿ ನಿಲ್ಲುತ್ತೆ ಅಂದ್ರೆ ಅದಕ್ಕೆ ನಮ್ಮ ತಂದೆ ಯಡಿಯೂರಪ್ಪ ಕಾರಣ. ಯಡಿಯೂರಪ್ಪ ನವರ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ ಎಂದು ಅಪ್ಪನನ್ನ ಹಾಡಿ ಹೊಗಳಿದ್ರು.
ಯಡಿಯೂರಪ್ಪ ನವರ ಹೋರಾಟವನ್ನು ಬಾಲ್ಯದಿಂದ ಹತ್ತಿರದಿಂದ ನೋಡಿದ್ದೇನೆ. ಯಡಿಯೂರಪ್ಪ ದೊಡ್ಡ ನಾಯಕನಾಗಿ ಬೆಳೆದು ಬಿಡ್ತಾನೆ ಎಂದು ಅವರ ಕಾರಿಗೆ ಎಲ್ಲರೂ ಕಲ್ಲು ಹೊಡೆಯೊ ಕೆಲಸ ಮಾಡಿದ್ರು. ಆದ್ರೆ ಎಷ್ಟು ನೋವು ತಿಂದರೂ ಯಡಿಯೂರಪ್ಪ ಅದೇ ಕಲ್ಲನ್ನು ತಳಪಾಯ ಮಾಡಿ,ತಮ್ಮ ಹೋರಾಟ ಗಟ್ಟಿಮಾಡಿಕೊಂಡರು ಎಂದು ಅಸಮಾಧಾನ ಹೊರಹಾಕಿದ್ರು. ರಾಜ್ಯಕ್ಕೆ ಬಿಎಸ್ ವೈ ( BSY ) ಕೊಡುಗೆ ಅಪಾರ. ರಾಜ್ಯದ ಎಲ್ಲಾ ಮಠಗಳಿಗೆ ಅವರು ಅನುದಾನ ಕೊಟ್ಟಿದ್ದಾರೆ. ಮಠಗಳು ಸರ್ಕಾರಕ್ಕಿಂತ ಹೆಚ್ಚಿನ ಕೆಲಸ ಮಾಡುತ್ತವೆ. ವೇದಿಕೆ ಮೇಲಿರೋ ಮುಖಂಡರಿಗೆ ಒಂದು ಕಿವಿಮಾತು ಹೇಳ್ತೀನಿ. ಇದನ್ನೂ ಓದಿ : – ಪ್ರಸನ್ನನಂದಾಪುರಿ ಸ್ವಾಮೀಜಿ ಆರೋಗ್ಯ ವಿಚಾರಿದ ಸಿಎಂ ಬೊಮ್ಮಾಯಿ
ಕಾಡಿನಲ್ಲಿ ಬೇಟೆಯಾಡೋ ಹುಲಿಯನ್ನ ಕರೆತಂದು ಬೋನ್ ನಲ್ಲಿ ಕೂಡಿ ಹಾಕಿದ್ರೆ ಅದು ಹುಲ್ಲು ತಿನ್ನಲ್ಲ. ಬೋನಿನಲ್ಲಿದ್ದರೂ ಹುಲಿ ಏನು ತಿನ್ನಬೇಕೋ ಅದೇ ತಿನ್ನೋದು. ಕಾಡಿನಿಂದ ಬೋನಿಗೆ ಬಂದರು ಹುಲಿ ತನ್ನ ಪ್ರವೃತ್ತಿ ಮರೆಯಲ್ಲ. ಬೇಟೆಯಾಡೋದನ್ನ ಮರೆಯಲ್ಲ ಎಂದು ಸೂಚ್ಯವಾಗಿ ಯಡಿಯೂರಪ್ಪ ಶಕ್ತಿ ಇನ್ನೂ ಕುಂದಿಲ್ಲ ಎನ್ನೋ ಸಂದೇಶ ನೀಡಿದ್ರು. ಯಾವ ರೀತಿ ಹುಲಿ ಬೇಟೆಯಾಡೊದನ್ನ ಮರೆಯೋದಿಲ್ಲವೋ ಅದೇ ರೀತಿ ನಮ್ಮ ಸಮಾಜ ಕೂಡ ಕರ್ನಾಟಕ ದಲ್ಲಿ ದೊಡ್ಡಮಟ್ಟದಲ್ಲಿ ಇದೆ. ಹೀಗಾಗಿ ನಾವು ಹುಲ್ಲು ತಿನ್ನುತ್ತಾ ಕೂರೋ ಅವಶ್ಯಕತೆ ಇಲ್ಲಾ ಎಂದು ಎಲ್ಲಾ ವೈರಿಗಳಿಗೆ ತಿರುಗೇಟು ನೀಡಿದ್ರು.
ಇದನ್ನೂ ಓದಿ : – ಬಿಎಂಟಿಸಿ ಮಹಾ ಯಡವಟ್ಟು – ಗುಜುರಿ ಬಸ್ ವಾಯವ್ಯ ಸಾರಿಗೆಗೆ ಮಾರಾಟ ಮಾಡಲು ನಿರ್ಧಾರ ..!