ರೋಹಿತ್ ಚಕ್ರತೀರ್ಥ(Rohith chakratheertha) ಗಡಿಪಾರು ಮಾಡಿ ನಾವು ಚಂದ ನೋಡಲಿಕ್ಕೆ ಆಗಲ್ಲ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ (Araga gnanendra) ತಿಳಿಸಿದ್ದಾರೆ. ಗಡಿಪಾರು ಮಾಡಬೇಕಾದರೇ ಸಾಕಷ್ಟು ನಿಯಮಾವಳಿಗಳಿರುತ್ತೆ.
ಈ ರೀತಿ ಹೇಳುವವರಿಗೆ ಅದು ಗೊತ್ತಿಲ್ಲ. ಯಾರನ್ನಾದರೂ ಗಡಿಪಾರು ಮಾಡಿ ನಾವು ಚಂದ ನೋಡಲಿಕ್ಕೆ ಆಗಲ್ಲ. ಗಡಿಪಾರು ಮಾಡುವಂತ ಯಾವ ಅಪರಾಧ ನಡೆದಿದೆ ಅನ್ನೋದು ನನ್ನ ಗಮನದಲ್ಲಿಲ್ಲ. ಈಗಾಗಲೇ ಅದರ ಬಗ್ಗೆ ಸಚಿವ ನಾಗೇಶ್ (Nagesh) ಮಾತನಾಡಿದ್ದಾರೆ. ಆದಿಚುಂಚನಗಿರಿ (Adhichunchanagiri ) ಸ್ವಾಮೀಜಿಗಳನ್ನು ನಾಗೇಶ್ ಭೇಟಿ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ರು.ಇದು 2017 ರಲ್ಲಿ ನಡೆದಿರೋ ಘಟನೆ, ಈಗಾಗಲೇ ಬಿ ರಿಪೋರ್ಟ್ ಕೂಡ ಆಗಿದೆ. ಯಾವುದೇ ಮೊಕದ್ದಮೆಗಳು ಸಹ ಇಲ್ಲ. ಇದರ ಬಗ್ಗೆ ಯಾವುದೇ ಚರ್ಚೆ ಅಗತ್ಯ ಇಲ್ಲಾ, ಆದರೂ ಆಗ್ತಾ ಇದೆ ಆಗಲಿ ಎೞದು ತಿಳಿಸಿದ್ದಾರೆ.
ಕಾದು ಕಾದು ಅಧಿಕಾರಿಗಳು ಸುಸ್ತು
ಇದಕ್ಕೂ ಮೊದಲು ಕೆಡಿಪಿ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ತಡವಾಗಿ ಆಗಮಿಸಿದ್ರು. ತುಮಕೂರು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ ನಡೆಸುತ್ತಿದೆ . 10:30 ಕ್ಕೆ ಕೆಡಿಪಿ ಸಭೆ ಆರಂಭವಾಗಬೇಕಿತ್ತು. 11 ಗಂಟೆಯಾದ್ರು ಗೃಹ ಸಚಿವ ಆರಗ ಜ್ಞಾನೇಂದ್ರ ಬರಲಿಲ್ಲ .ಆರಗ ಜ್ಞಾನೇಂದ್ರ ಬರುವಿಕೆಗೆ ಅಧಿಕಾರಿಗಳು ಕಾದು ಕುಳಿತಿದ್ರು . ಮಾಧುಸ್ವಾಮಿಯಂತೆ (Madhuswami) ಸಮಯ ಪಾಲನೆ ಮಾಡಲ್ಲ ಅಂತಾ ಅಧಿಕಾರಿಗಳು ಗುಸು ಗುಸು ಮಾತನಾಡುತ್ತಿದ್ರು. ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸಮಯಕ್ಕೆ ಸರಿಯಾಗಿ ಹಾಜರಾಗ್ತಿದ್ದರು. ಇದನ್ನೂ ಓದಿ : – ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಗೆ ಗುಡ್ ಬೈ