ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ 243ಕ್ಕೆ ಏರಿಕೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ( BBMP ) ವಾರ್ಡ್ ಮರುವಿಂಗಡಣೆ ವರದಿ ಸಿದ್ಧಪಡಿಸಲಾಗಿದೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮುದ್ರಣ ಮಾಡಬೇಕು. 2-3 ದಿನಗಳಲ್ಲಿ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ ಮುಖ್ಯ ಆಯುಕ್ತರು, ಬೆಂಗಳೂರಲ್ಲಿ ಮಳೆ ನಡುವೆಯೂ ರಸ್ತೆಗುಂಡಿ ಮುಚ್ಚಲಾಗುತ್ತಿದೆ. ನಗರದಲ್ಲಿ ಈವರೆಗೂ 5,500 ರಸ್ತೆ ಗುಂಡಿಗಳನ್ನ ಮುಚ್ಚಲಾಗಿದೆ. ಜೂನ್ ರೊಳಗೆ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತದೆ ಎಂದು ತಿಳಿಸಿದ್ರು. ಇದನ್ನೂ ಓದಿ : – ಡಿ.ಕೆ.ಶಿವಕುಮಾರ್ ಸಿಎಂ ಆದ್ರೆ ಕುಣಿಗಲ್‌ಗೆ ನಾನೇ ಮುಖ್ಯಮಂತ್ರಿ..! ಶಾಸಕರ ವಿಡಿಯೋ ವೈರಲ್
ಇದೇ ವೇಳೆ ಬಿಬಿಎಂಪಿ ಅಧಿಕಾರಿಯಿಂದ ಗುತ್ತಿಗೆದಾರರ ಮೇಲೆ ಹಲ್ಲೆ ನಡೆದ ವಿಚಾರಕ್ಕೆ ಸಂಬಂಧಿಸಿ ಆಯುಕ್ತರು ಪ್ರತಿಕ್ರಿಯೆ ನೀಡಿದ್ರು. ಮುಖ್ಯ ಇಂಜಿನಿಯರ್ ಗುತ್ತಿಗೆದಾರರ ನಡುವೆ ಸಂಧಾನ ನಡೆದಿದೆ. ವಿಶೇಷ ಆಯುಕ್ತ ರವೀಂದ್ರ ನೇತೃತ್ವದಲ್ಲಿ ತನಿಖೆ ನಡೆಸುತ್ತೇವೆ ಎಂದರು. ಕೊರೋನಾ ಸೋಂಕಿತರ ಸಂಖ್ಯೆ ಸ್ವಲ್ಪ ಏರಿಕೆಯಾಗಿದೆ ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ. ಕೊರೊನಾ ಟೆಸ್ಟ್ ಈಗ 15 ಸಾವಿರ ಮಾಡಲಾಗುತ್ತಿದೆ. ಟ್ರೇಸಿಂಗ್ ಹೆಚ್ಚಳ ಮಾಡುತ್ತೇವೆ ಆರು ಕೋಟಿ ಹೊಸ ವಾರ್ಡ್ ಗೆ ಹಳೆ ವಾರ್ಡ್ ಗಳಿಗೆ ನಾಲ್ಕು ಕೋಟಿ ನೀಡಲಾಗಿದೆ ಎಂದು ತಿಳಿಸಿದ್ರು.
ಇದನ್ನೂ ಓದಿ : – ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಗೆ ಗುಡ್ ಬೈ