ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ (Sonia Gandhi) ಹಾಗೂ ರಾಹುಲ್ ಗಾಂಧಿ ( Rahul Gandhi ) ಗೆ ED ನೊಟೀಸ್ ನೀಡಿದೆ. ಜೂನ್ 2 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಈ ಹಿಂದೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ( Mallikarjun Kharge ) ಗೂ ನೊಟೀಸ್ ನೀಡಲಾಗಿತ್ತು. ಆಸ್ಕರ್ ಫರ್ನಾಂಡಿಸ್ ಈ ಹಿಂದೆ ಜವಾಹರಲಾಲ್ ನೆಹರು ಟ್ರಸ್ಟ್ ಗೆ ಅಧ್ಯಕ್ಷರಾಗಿದ್ದರು. ಫರ್ನಾಂಡಿಸ್ ನಿಧನ ನಂತರ ಖರ್ಗೆ ಟ್ರಸ್ಟ್ ಗೆ ಅಧ್ಯಕ್ಷ ಆಗಿದ್ದರು.
ಈ ಸಂಸ್ಥೆಗೆ ಜವಾಹರ್ ಲಾಲ್ ನೆಹರೂ ಮಾರ್ಗದರ್ಶಿ ಹಾಗೂ ಮುಖ್ಯಸ್ಥರಾಗಿದ್ದರು. ಐದು ಸಾವಿರ ಸ್ವಾತಂತ್ರ್ಯ ಹೋರಾಟಗಾರರು ಈ ಸಂಸ್ಥೆಯ ಷೇರನ್ನು ಹೊಂದಿದ್ದರು, ಇದರ ಜೊತೆಗೆ ನೂರು ರೂಪಾಯಿ ಮುಖಬೆಲೆಯ 2,000 ಮತ್ತು 10 ರೂಪಾಯಿ ಮುಖಬೆಲೆಯ 30,000 ಇಕ್ವಿಟಿ ಷೇರನ್ನು ಇವರಿಗೆಲ್ಲಾ ಹಂಚಲಾಗಿತ್ತು.
1938ರ ಸೆಪ್ಟೆಂಬರ್ 9ರಂದು ಜವಾಹರಲಾಲ್ ನೆಹರೂ ಅವರ ನೇತೃತ್ವದಲ್ಲಿ ಲಖನೌದಲ್ಲಿ ಇಂಗ್ಲಿಷ್ ಆವೃತ್ತಿ ‘ನ್ಯಾಷನಲ್ ಹೆರಾಲ್ಡ್’ (National Herald ) ಎನ್ನುವ ಹೆಸರಿನ ಮೂಲಕ ಪತ್ರಿಕೆಯನ್ನು ಆರಂಭಿಸಲಾಗಿತ್ತು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಯನ್ನು ಅಕ್ರಮ ಮಾರ್ಗದಿಂದ ಖರೀದಿಸಿದ ಆರೋಪ ರಾಹುಲ್, ಸೋನಿಯಾ, ಆಸ್ಕರ್ ಒಡೆತನದ ಯಂಗ್ ಇಂಡಿಯಾ ಕಂಪನಿ ಮೇಲೆ ಇದೆ. ಇದನ್ನೂ ಓದಿ : – ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಗೆ ಗುಡ್ ಬೈ
90.25 ಕೋಟಿ ರು. ಮೌಲ್ಯದ ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಯನ್ನು ಕೇವಲ 50 ಲಕ್ಷ ರುಪಾಯಿ ನೀಡಿ ಖರೀದಿಸಲಾಗಿತ್ತು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ದೂರಿದ್ದರು. ಇದೇ ವೇಳೆ, ತೆರಿಗೆ ವಿವರ ಸಲ್ಲಿಕೆ ವೇಳೆ ಯಂಗ್ ಇಂಡಿಯಾದಲ್ಲಿನ ತಮ್ಮ ಷೇರು ಮೌಲ್ಯ 68 ಲಕ್ಷ ರು. ಎಂದು ರಾಹುಲ್ ಹೇಳಿದ್ದರು.
ಆದರೆ ಆದಾಯ ತೆರಿಗೆ ಇಲಾಖೆ ಮೌಲ್ಯಮಾಪನ ಮಾಡಿದಾಗ ಅದರಲ್ಲಿರುವ ರಾಹುಲ್ ಷೇರುಗಳ ಮೌಲ್ಯ 154 ಕೋಟಿ ರುಪಾಯಿ ಎಂದು ತಿಳಿದುಬಂದಿತ್ತು. ಹೀಗಾಗಿ ಇದೊಂದು ತೆರಿಗೆ ವಂಚನೆ ಪ್ರಕರಣ ಎಂಬ ತೀರ್ಮಾನಕ್ಕೆ ಆದಾಯ ತೆರಿಗೆ ಇಲಾಖೆ ಬಂದಿತ್ತು ಹಾಗೂ ಮರುಮೌಲ್ಯಮಾಪನಕ್ಕೆ ಮುಂದಾಗಿತ್ತು. ಅಲ್ಲದೆ, 2011-12ನೇ ಸಾಲಿನಲ್ಲಿ 249.15 ಕೋಟಿ ರು. ತೆರಿಗೆ ಕಟ್ಟಿಎಂದು ಯಂಗ್ ಇಂಡಿಯಾಗೆ ಆದಾಯ ತೆರಿಗೆ ಇಲಾಖೆ ಡಿಮ್ಯಾಂಡ್ ನೋಟಿಸ್ ನೀಡಿತ್ತು.
ಇದನ್ನೂ ಓದಿ : – Rajya Sabha Election- ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈ ರಾಂ ರಮೇಶ್ ,ಮನ್ಸೂರ್ ಆಲಿ ಖಾನ್ ನಾಮಪತ್ರ ಸಲ್ಲಿಕೆ