ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿವಾದಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ( B C NAGESH )ಸಲ್ಲಿಸುವ ವರದಿಯನ್ನಾಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (BASAVARAJ BOMMAI) ತಿಳಿಸಿದ್ದಾರೆ.
ಮಣಿಪಾಲದಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಬಗ್ಗೆ ರಾಜ್ಯಾದ್ಯಂತ ಎದ್ದಿರುವ ವಿವಾದ, ಜನರ ಮಾನಸಿಕ ಸ್ಥಿತಿಗತಿ ಬಗ್ಗೆ ಶಿಕ್ಷಣ ಸಚಿವರ ಬಳಿ ಸವಿಸ್ತಾರ ವರದಿಯನ್ನು ಕೇಳಿದ್ದೇನೆ. ಅವರು ವರದಿ ಸಲ್ಲಿಸಿದ ನಂತರ ಅದನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ಯಾರನ್ನಾದ್ರೂ ಗಡಿಪಾರು ಮಾಡಿ ನಾವು ಚಂದ ನೋಡಲಿಕ್ಕೆ ಆಗಲ್ಲ – ಆರಗ ಜ್ಞಾನೇಂದ್ರ
ಈಗಾಗಲೇ ಶಾಲೆಗಳು ಆರಂಭವಾಗಿವೆ, ಶಿಕ್ಷಣ ಸಚಿವರು ನಾಳೆ ವರದಿ ನೀಡುವ ಸಾಧ್ಯತೆ ಇದೆ. ಪಠ್ಯಪುಸ್ತಕ ಪರಿಷ್ಕರಣೆ ಪರವಾಗಿರುವವರ ಅಭಿಪ್ರಾಯಗಳನ್ನು ಸಹ ತೆಗೆದುಕೊಂಡು. ಒಟ್ಟಾರೆಯಾದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಡಪಡಿಸಿದ್ದಾರೆ. ಪಠ್ಯಪುಸ್ತಕದಲ್ಲಿ ತಮ್ಮ ಪಾಠ, ಕವಿತೆಗಳನ್ನು ಕೈಬಿಡುವಂತೆ ಕೆಲವು ಲೇಖಕರು, ಕವಿಗಳು ಬರೆದಿರುವ ಪತ್ರ ಕುರಿತಂತೆ ಅವರಲ್ಲಿ ಈ ಬಗ್ಗೆ ಮಾತನಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : – ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಗೆ ಗುಡ್ ಬೈ