ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ( Sidhu Moose Wala ) ಅವರ ಹತ್ಯೆಯಿಂದ ಎಚ್ಚೆತ್ತುಕೊಂಡಿರುವ ಪಂಜಾಬ್ ಸರ್ಕಾರ, ಕೆಲವು ದಿನಗಳ ಹಿಂದಷ್ಟೇ ವಾಪಸ್ ತೆಗೆದುಕೊಂಡಿದ್ದ 424 ವಿವಿಐಪಿಗಳ ಭದ್ರತೆಯನ್ನು ಮರಳಿ ನೀಡಿದೆ. ಸಿಧು ಮೂಸೆ ವಾಲಾ ಅವರ ಹತ್ಯೆ ನಡೆದ ಐದು ದಿನಗಳ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. ಜೂನ್ 7ರಿಂದ ಎಲ್ಲರಿಗೂ ಮತ್ತೆ ಭದ್ರತೆ ಒದಗಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಕಾಂಗ್ರೆಸ್ ನಾಯಕರೂ ಆಗಿದ್ದ ಸಿಧು ಮೂಸೆ ವಾಲಾ ಸೇರಿದಂತೆ 420ಕ್ಕೂ ಹೆಚ್ಚು ವಿವಿಐಪಿಗಳಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಎಎಪಿ ಸರ್ಕಾರ ವಾಪಸ್ ತೆಗೆದುಕೊಂಡಿತ್ತು. ಅದರ ಮರು ದಿನವೇ ಸಿಧು ಅವರ ಮೇಲೆ ದುಷ್ಕರ್ಮಿಗಳು ಭಯಾನಕ ದಾಳಿ ನಡೆಸಿದ್ದರು. ಇದನ್ನೂ ಓದಿ : – 424 ವಿಐಪಿಗಳ ಭದ್ರತೆ ಹಿಂಪಡೆದ ಪಂಜಾಬ್ ಸರ್ಕಾರ
ಕೆನಡಾ ಮೂಲದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದು, ಈತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯ ಎಂದು ಹೇಳಲಾಗುತ್ತಿದೆ. ಬಿಷ್ಣೋಯಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸ್ ವಿಶೇಷ ಘಟಕ ತಿಹಾರ್ ಜೈಲಿನಲ್ಲಿರುವ ಬಿಷ್ಣೋಯಿನನ್ನು ಮೂರು ದಿನಗಳ ಕಾಲ ತನ್ನ ವಶಕ್ಕೆ ಪಡೆದುಕೊಂಡಿದೆ.
ಇದನ್ನೂ ಓದಿ : – ಕಾಶ್ಮೀರದಲ್ಲಿ ಉಗ್ರರೇ ಹಿಂದೂಗಳ ಟಾರ್ಗೆಟ್ – ಅಮಿತ್ ಶಾ ದೋವಲ್ ಮಹತ್ವದ ಚರ್ಚೆ