ಬಿಜೆಪಿ ಕೋಮು ನಶೆ ಏರಿದೆ ಎಂಬ ಸಿದ್ದರಾಮಯ್ಯ(Siddaramaiah) ಹೇಳಿಕೆ ವಿಚಾರವಾಗಿ ಮಾಜಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ (Ct.Ravi)ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಲ್ಲಿ (Chikamagaluru)ಮಾತನಾಡಿದ ಅವರು ಹೆಡ್ಗೆವಾರ್ ಕಂಡರೆ ಇವರಿಗೆ ಯಾಕೆ ಸಂಕಟ.
ಭಾರತ್ ಮಾತಾ ಕಿ ಜೈ ಅನ್ನೋ ಶಿಕ್ಷಣವನ್ನು ಹೆಡ್ಗೆವಾರ್ ಕಲಿಸಿದ್ದರು. ಭಾರತಕ್ಕೆ ಬಾಂಬ್ ಹಾಕುವುದನ್ನು ಅವರು ಕಲಿಸಿಲ್ಲ. ಭಾರತಕ್ಕೆ ಬಾಂಬ್ ಹಾಕುವವರು ಸಿದ್ದರಾಮಯ್ಯಗೆ ಬಹಳ ಬೇಕಾದವರು. ಆದರೆ ಭಾರತ್ ಮಾತಾ ಕೀ ಜೈ ಅಂದರೆ ಇವರಿಗೆ ಉರಿ ಹತ್ತುತ್ತೆ. ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಇರಬೇಕೋ, ಬೇಡ್ವೋ ಅನ್ನೋದನ್ನ ಕೇಳೋಕೆ ಇವರ್ಯಾರು. ಪಠ್ಯಪುಸ್ತಕ ಪರಿಷ್ಕರಣ ಸಮಿತಿ ತೀರ್ಮಾನ ಮಾಡಿದೆ, ಸರ್ಕಾರ ಒಪ್ಪಿದೆ. ಮಧ್ಯೆದಲ್ಲಿ ನಂದು ಎಲ್ಲಿಡಲಿ ಅಂತಾ ಕೇಳೋಕೆ ಇವರ್ಯಾರು? ಇವರು ಹೇಳಿದ ಹಾಗೆ ಕೇಳೋಕೆ ಆಗುತ್ತಾ…? ಎಂದು ಪ್ರಶ್ನೆ ಮಾಡಿದ್ರು. ಇದನ್ನೂ ಓದಿ : – ಪವನ ಕಲ್ಯಾಣ ಭೇಟಿಗಾಗಿ 400 ಕಿ.ಮೀ ಪಾದಯಾತ್ರೆ