ಜೆಡಿಎಸ್ ಪಕ್ಷ ವನ್ನು ಅಷ್ಟು ಸುಲಭವಾಗಿ ಯಾರು ನಾಶ ಮಾಡಲು ಆಗಲ್ಲ. ಕಾರ್ಯಕರ್ತರ ಹೋರಾಟದ ಮೇಲೆ ಜೆಡಿಎಸ್ ನಿಂತುಕೊಂಡಿದೆ. ಬಿಟ್ಟು ಹೋದ ನಾಯಕರು, ಚುನಾವಣೆಗಳನ್ನು ಉಪಯೋಗ ಮಾಡಿಕೊಂಡ್ರೆ ಅದು ಸಾಧ್ಯವಿಲ್ಲ ಎಂದು ಕಲಬುರಗಿ ನಗರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯ ಸಭೆ ಚುನಾವಣೆ ನಂತ್ರ ಮತದಾನದ ಬಗ್ಗೆ ಚರ್ಚೆ ಮಾಡ್ತೇನೆ. ಮೂರು ಪಕ್ಷಗಳು ತಮ್ಮದೆ ಆದ ಲೆಕ್ಕಾಚಾರ ಮಾಡಿಕೊಂಡಿದ್ದಾರೆ. ಅಡ್ಡ ಮತದಾನಕ್ಕಿಂತ ಗಣಿತ ಲೆಕ್ಕಾಚಾರ ವರ್ಕ್ ಆಗುತ್ತದೆ ಎಂದು ಹೇಳಿದ್ರು.
ಕುಮಾರಸ್ವಾಮಿ ಬಗ್ಗೆ ಬಸವರಾಜ್ ಹೊರಟ್ಟಿ ಹೇಳಿಕೆ ವಿಚಾರ
ಅವರು 40 ವರ್ಷ ಪ್ರತಿನಿಧಿಸಿದ್ದರಲ್ಲ, ಅವಾಗ ಏನು ಮಾಡಿದ್ದಾರೆ. ನಾನು ಸಿಎಂ ಆದಾಗ ಎಷ್ಟು ಕಾಲೇಜು ಇವೆ ಅಂತಾ ಹೊರಟ್ಟಿಯವರಿಗೆ ಮಾಹಿತಿ ಇರಲಿಲ್ಲ. ಕಪ್ ಗೆಲ್ಲಿಸಲು ಅನೇಕರು ಹೋರಾಟ ಮಾಡುತ್ತಾರೆ. ಆದ್ರೆ ನಾಯಕ ಕಪ್ ಹಿಡಿಯೋದು ಪದ್ದತಿ. ಇದನ್ನು ಓದಿ :- ಮೈಸೂರಿನಲ್ಲಿ ಆಸ್ಪತ್ರೆ ಕಟ್ಟಿಸಿದ್ದು ಇವನಾ..? -ಸಂಸದ ಪ್ರತಾಪ್ ಸಿಂಹ ವಿರುದ್ದ ಗುಡುಗಿದ ಸಿದ್ದರಾಮಯ್ಯ
ಆದ್ರೆ ನಾನೇ ಬ್ಯಾಟಿಂಗ್, ಪೀಲ್ಡಿಂಗ್, ಬೌಲಿಂಗ್ ಮಾಡಿದ್ದೇನೆ. ಅವರು ಏನು ಮಾಡಿಲ್ಲ. ನಮ್ಮಿಂದ ಎಲ್ಲಾ ಪಡೆದುಹೋದ ಮೇಲೆ ಮಾತಾಡ್ತಾರೆ. ಅವರ ಗೆಲುವಿಗೆ ಯಾವ ರೀತಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಚಡ್ಡಿ ರಾಜಕಾರಣ ನನಗೆ ಬೇಡ. ಅವರವರೇ ಚಡ್ಡಿ ಬಿಚ್ಚುಕೋತಾರೋ ಬಿಚ್ಚಿಕೊಳ್ಳಲಿ. ಆದ್ರೆ ಜನರ ಚಡ್ಡಿ ಬಿಚ್ಚೋದು ಬೇಡ ಎಂದು ಹೇಳಿದ್ರು.
ಇದನ್ನು ಓದಿ :- ಮೈಸೂರಿನಲ್ಲಿ ಆಸ್ಪತ್ರೆ ಕಟ್ಟಿಸಿದ್ದು ಇವನಾ..? -ಸಂಸದ ಪ್ರತಾಪ್ ಸಿಂಹ ವಿರುದ್ದ ಗುಡುಗಿದ ಸಿದ್ದರಾಮಯ್ಯ