ಸಿದ್ದರಾಮಯ್ಯನವರು ಪುರಸ್ಕೃತ ಪಠ್ಯದಲ್ಲಿ ಏನು ಬಿಟ್ಟಿದ್ರೂ ಈಗಾಗಲೇ 2 ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಈಗ ನಾವೇನು ಸೇರಿಸಿದ್ದೇವೆ ಎಲ್ಲವನ್ನೂ ಪಬ್ಲಿಕ್ ಡೊಮೈನ್ ನಲ್ಲಿ ಇಡುತ್ತೇವೆ.
ಜನರು ತಪ್ಪಿದೆ ಅಂತ ಹೇಳಿದ್ದನ್ನ ಬದಲಾಯಿಸುವ ಮನಸ್ಸಿದೆ ಅಂತ ಈಗಾಗಲೇ ಸಿಎಂ ಹೇಳಿದ್ದಾರೆ. ತಪ್ಪಿದೆ ಅಂದಿದ್ದನ್ನ ನಾವು ಸರಿಪಡಿಸಿದ್ದೇವೆ. ಪಠ್ಯ ಪರಿಷ್ಕರಣೆ ಹಿಂಪಡೆದುಕೊಳ್ಳಬೇಕೆಂಬ ಸಿದ್ದರಾಮಯ್ಯ ಪತ್ರ ವಿಚಾರ ಜನ ತೀರ್ಮಾನ ಮಾಡ್ತಾರೆ, ಜನ ಮಾತನಾಡ್ತಾರೆ. ಜನಪ್ರತಿನಿಧಿಗಳೆ ಹೇಳೊದೆ ಸರಿ ಅಂತ ಏನಿಲ್ಲ. ಸರಿ ಏನಿದೆ ಅನ್ನೊದನ್ನೆ ಜನರೇ ಹೇಳಲಿ. ಇದನ್ನೂ ಓದಿ : – ನಮ್ಮ ಮೂರನೇ ಅಭ್ಯರ್ಥಿ ಗೆಲುವಿಗೆ ಎರಡನೇ ಪ್ರಾಶಸ್ತ್ಯದ ಮತಗಳೇ ಸಾಕು – ಬಿಎಸ್ ವೈ
ಯಾವ ಪಾಠ ಹಾಕಿದ್ರು,ಯಾವ ಪಾಠ ತೆಗೆದಿದ್ಯಾಕೆ ಅಂತ ಸಿದ್ದರಾಮಯ್ಯ ಹೇಳಬೇಕಾಗಿತ್ತು. ಸಿದ್ದರಾಮಯ್ಯ ಈ ಹಿಂದೆ ಜನರಿಗೆ ಉತ್ತರವೇ ಕೊಡಲೇ ಇಲ್ಲ. ದೇಶದ ಅಭಿಮಾನ ತಿಳಿಸುವ ಪಠ್ಯವನ್ನು ಸಿದ್ದರಾಮಯ್ಯ ಕೈಬಿಟ್ಟರು. ಅಕಸ್ಮಾತ್ ಲೋಪದೋಷವಿದ್ದರೆ ಶಿಕ್ಷಣ ಇಲಾಖೆ ತಜ್ಞರ ಜೊತೆ ಮಾತನಾಡಿ ಸರಿಪಡಿಸುತ್ತೇವೆ ಅಂತ ಸಿಎಂ ಹೇಳಿದ್ದಾರೆ. ಒಂದು ವಾರದಲ್ಲಿ ಪಠ್ಯವನ್ನು ಪಬ್ಲಿಕ್ ಡೊಮೈನ್ನಲ್ಲಿ ಇಡ್ತೀವಿ ಎಂದು ತಿಳಿಸಿದ್ರು.
ಇದನ್ನೂ ಓದಿ : – ಯಡಿಯೂರಪ್ಪ ಜೊತೆ ಭೇಟಿ ಅಕಸ್ಮಿಕ – ಸಿದ್ದರಾಮಯ್ಯ ಸ್ಪಷ್ಟನೆ