ಇದು ರಾಜಧಾನಿ ಬೆಂಗಳೂರಿನ ಜನ ಬೆಚ್ಚಿ ಬೀಳಿಸೋ ಸುದ್ದಿ. ಬೆಂಗಳೂರಿನ ಶ್ರೀರಾಂಪುರದಲ್ಲಿ ಶಂಕಿತ ಉಗ್ರನೋರ್ವನನ್ನ ಬಂಧಿಸಲಾಗಿದೆ. ಕಳೆದೆರಡು ದಿನಗಳ ಹಿಂದೆ ಬೆಂಗಳೂರಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಎಂಬಾತನನ್ನ ಬಂಧಿಸಲಾಗಿದೆ. ಜಮ್ಮ ಮತ್ತು ಕಾಶ್ಮೀರ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಲ್ಲಿ ಈತ ತಾಲಿಕ್ ಎಂದು ಹೆಸರು ಬದಲಿಸಿ ಓಡಾಡ್ತಿದ್ದ. ಬಿಎನ್ಎಲ್ ಏರ್ ಸರ್ವಿಸ್ ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡಿಕೊಂಡಿದ್ದ. ಬೆಂಗಳೂರಿಗೆ ಬರುವಾಗ ತಾಲಿಬ್ ಹುಸೇನ್ ತನ್ನ ಪೊಲೀಸ್ ಪತ್ನಿಯನ್ನು ಕರೆದುಕೊಂಡು ಬಂದಿದ್ದು ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಶ್ರೀ ರಾಂಪುರದಲ್ಲಿ ನೆಲೆಸಿದ್ದ. ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷ ಈತನಿಗೆ ಆಶ್ರಯ ನೀಡಿದ್ದ. ಮಸೀದಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಅನ್ನೋ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ : – ಬೆಂಗಳೂರಿನ ಶ್ರೀರಾಂಪುರದಲ್ಲಿ ಶಂಕಿತ ಉಗ್ರ ಬಂಧನ
ಸದ್ಯ ತಾಲಿಬ್ ನನ್ನು ಬಂಧಿಸಿರುವ ಸಿಆರ್ ಪಿಎಫ್ ಯೋಧರು ಆತನನ್ನ ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ. ಜೂನ್ 3ರಂದೆ ಶಂಕಿತ ಆರೋಪಿಯ ಬಂಧನವಾಗಿದ್ದರೂ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ತಾಲಿಬ್ ಹುಸೇನ್ ಕಳೆದ 6 ವರ್ಷದ ಹಿಂದೆ ಹಿಜ್ಬುಲ್ ಸಂಘಟನೆಯಲ್ಲಿ ಕಾರ್ಯಕರ್ತನಾಗಿದ್ದ. ಹಿಜ್ಬುಲ್ ಸಂಘಟನೆಯಲ್ಲಿ ಈತನನ್ನು ಕಮಾಂಡೋ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿತ್ತು. ಈ ಹಿಜ್ಬುಲ್ ಸಂಘಟನೆ ಹಿಂದೂ ಕಾರ್ಯಕರ್ತರ ಹತ್ಯೆ ಮಾಡುವ ಸಂಘಟನೆಯಾಗಿದೆ ಎನ್ನಲಾಗಿದೆ. ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರ ಸಹಾಯ ಪಡೆದ ಜಮ್ಮು – ಕಾಶ್ಮೀರದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : – RSS, ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದುಗೆ ಇರುವ ಗೌರವ ಹಾಳಾಗುತ್ತೆ – ಯಡಿಯೂರಪ್ಪ