ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಯಾರು ಮೈದಾನದ ಮಾಲೀಕರು ಅಂತ ಹೇಳ್ತಾರೋ ಅವ್ರು ದಾಖಲೆ ಇದ್ದರೆ ಕೊಡಲಿ. ೧೯೭೪ ರ ಸಿಟಿ ಸರ್ವೆಯಲ್ಲಿ ಆಟದ ಮೈದಾನ ಅಂತ ಇದೆ. ಇದರ ಮಾಲೀಕತ್ವ ಸಿಟಿ ಕಾರ್ಪೋರೇಷನ್ ಅಂತ ಇದೆ. ವರ್ಷಕ್ಕೆ 2 ಬಾರಿ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ೧೯೬೨ ರಲ್ಲಿ ಸುಪ್ರಿಂ ಕೋರ್ಟ್ ಆದೇಶ ಕೊಟ್ಟಿದೆ. ಸುಪ್ರಿಂ ಕೋರ್ಟ್ ನ ದಾಖಲೆ ಇದ್ದರೂ ಅದರಲ್ಲಿ ಒಂದು ಪೇಜ್ ಮಿಸ್ಸಿಂಗ್ ಇದೆ. ಇದನ್ನೂ ಓದಿ :- ಮೈದಾನದ ಮಾಲೀಕರು ಯಾರು ಅಂತ ಹೇಳ್ತಾರೋ ಅವ್ರು ದಾಖಲೆ ಇದ್ದರೆ ಕೊಡಲಿ – ತುಷಾರ್ ಗಿರಿನಾಥ್
ಖಾತಾ ನೋಂದಣಿಯಲ್ಲಿ ಈದ್ಗಾ, ದರ್ಗಾ, ಅಂತಾನೂ ಇದೆ. ಯಾವ ಆಧಾರದ ಮೇಲೆ ಈದ್ಗಾ ಮೈದಾನ ಆಗಿದೆ ಅನ್ನೋದು ಗೊತ್ತಾಗಿಲ್ಲ. ಸುಪ್ರಿಂ ಆದೇಶವನ್ನ ಅಧಿಕೃತವಾಗಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮಕ್ಕಳಿಗೆ ಆಟದ ಮೈದಾನ ಅಂತ ಇದೆ. ಆಟಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಅನುಮತಿ ನೀಡುವುದು ಬಿಡುವುದು ಜಂಟಿ ಆಯುಕ್ತರ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದ್ರು.
ಇದನ್ನೂ ಓದಿ :- ಮೈಕ್ ದಂಗಲ್ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆ ಪ್ರತಿಭಟನೆ