ಬೊಮ್ಮಸಂದ್ರದಿಂದ (Bommasandra) ತಮಿಳುನಾಡಿನ ಹೊಸೂರುವರೆಗೆ (Tamilnadu hosur) ಸುಮಾರು 20.5 ಕಿ.ಮೀ ಉದ್ದದ ಮೆಟ್ರೋ ರೈಲು(Metro train) ವಿಸ್ತರಣೆ ಯೋಜನೆಗೆ ಕರ್ನಾಟಕ ಸರ್ಕಾರ (Karnataka governent) ಅನುಮೋದನೆ ನೀಡಿದೆ.
ಯೋಜನೆ ಅನುಷ್ಟಾನಕ್ಕೆ ಅಧ್ಯಯನ ನಡೆಸುವಂತೆ ತಮಿಳುನಾಡು ಸರ್ಕಾರವನ್ನು ಕರ್ನಾಟಕ ಕೇಳಿದೆ. ಈ ಸಂಬಂಧ ಮೇ 23 ರಂದು ಬಿಎಂಆರ್ ಸಿಎಲ್ (BMRCL) ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.ಬಿಎಂಆರ್ ಸಿಎಲ್ ನ ಎರಡನೇ ಹಂತದ ಯೋಜನೆ ಆರ್ ರಸ್ತೆ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರದವರೆಗೂ ಅನುಷ್ಠಾನವಾಗುತ್ತಿದೆ. ಇದರೊಂದಿಗೆ ತಮಿಳುನಾಡಿನ ಹೊಸೂರುವರೆಗೆ 20.5 ಕಿ.ಮೀ ಉದ್ದದ ಮೆಟ್ರೋ ಮಾರ್ಗ ವಿಸ್ತರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ.11.7 ಕಿ.ಮೀ ಕರ್ನಾಟಕ ಮತ್ತು 8.8 ಕಿ.ಮೀ. ತಮಿಳುನಾಡಿಗೆ ಬರಲಿದೆ. ಕರ್ನಾಟಕ ಸರ್ಕಾರ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಬೊಮ್ಮಸಂದ್ರ- ಹೊಸೂರು ನಡುವಣ ಮೆಟ್ರೋ ಮಾರ್ಗದಲ್ಲಿ ಅಧ್ಯಯನ ನಡೆಸುವಂತೆ ತಮಿಳುನಾಡು ಸರ್ಕಾರಕ್ಕೆ ಕರ್ನಾಟಕ ಹೇಳಿರುವುದಾಗಿ ಪ್ರಸ್ತಾವನೆಯಲ್ಲಿ ಹೇಳಲಾಗಿದೆ.ಬೊಮ್ಮಸಂದ್ರ ಮತ್ತು ಹೊಸೂರು ನಡುವಿನ ಮೆಟ್ರೋ ಮಾರ್ಗದಿಂದ ಉಭಯ ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ : – ಆಲ್ ಖೈದಾ ಬೆದರಿಕೆ ಪತ್ರ- ಏನಾದರು ಅನಾಹುತ ಸಂಭವಿಸಿದಲ್ಲಿ ಬಿಜೆಪಿಯೇ ಹೊಣೆ- ಶಿವಸೇನೆ