ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್ ಹರಿಸಲು ಮುಂದಾದರೆ ನಾವು ಹೋಗಿ ಅಲ್ಲೆ ಮಲಗುತ್ತೇವೆ. ಉತ್ತರ ಪ್ರದೇಶದಲ್ಲಿ ಮಾಡಿದರು ಅಂತ ಕರ್ನಾಟಕದಲ್ಲಿ ಮಾಡಲು ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಇಲ್ಲಿ ಕಾನೂನು ಇದೆ. ಇವರು ಉದ್ದೇಶ ಪೂರ್ವಕವಾಗಿ ಮೈನಾರಿಟಿಯವರನ್ನ ಟಾರ್ಗೆಟ್ ಮಾಡಿ ಕೆಲಸ ಮಾಡಿತ್ತಿದ್ದಾರೆ. ಹೆದರಿಸಬೇಕು ಬೆದರಿಸಬೇಕು ಅಂತ ಸುಮ್ಮನೆ ಕಿರುಕುಳ ಕೊಡ್ತಿದಾರೆ. ಎಲ್ಲಾ ಜಾತಿ ಮೇಲೆ ಮಾಡೋಕೆ ಹೊರಟಿದ್ದಾರೆ ಅದಕ್ಕೆಲ್ಲ ಇಲ್ಲಿ ಅವಕಾಶ ಇಲ್ಲ. ಇದನ್ನೂ ಓದಿ : – ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಎಂಟಿಬಿ ನಾಗರಾಜ್ ನಾಗಿನಿ ಡ್ಯಾನ್ಸ್
ನಾನು ಇಂದು ತೀರ್ಥಹಳ್ಳಿ ಹೋಗಬೇಕಿತ್ತು ಆದರೆ ಕೋರ್ಟ್ ಗೆ ಹಾಜರಾಗಬೇಕಿದೆ. ಹಾಗಾಗಿ ಬೆಳಿಗ್ಗೆ ೮-೩೦ ಕ್ಕೆ ಪ್ರವಾಸ ರದ್ದು ಮಾಡಿದೆ. ೨-೩ ಕೇಸುಗಳಿವೆ ಕೋರ್ಟ್ ಅಟೆಂಡ್ ಮಾಡಬೇಕು. ನಮ್ಮ ಕ್ಷೇತ್ರದಲ್ಲಿ ತುಂಬಾ ಬೇಕಾದವರು ಹಿರಿಯರು ಒಬ್ಬರು ತೀರಿಕೊಂಡಿದ್ದಾರೆ ಅಲ್ಲಿಗೆ ಹೋಗಬೇಕು. ಬೇರೆ ಬೇರೆ ವಿಚಾರಗಳಿವೆ. ಯಾಕೆ ಈ ರೀತಿ ಕಿರುಕುಳ ಕೊಡಿತ್ತೊದ್ದಾರೋ ನಮ್ಮ ನಾಯಕರುಗಳಿಗೆ ಗೊತ್ತಿಲ್ಲ ಎಂದು ಹೇಳಿದ್ರು.
ಇದನ್ನೂ ಓದಿ : – ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೆರೆಡು ದಿನ ಮಳೆ