2023ರ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ತಮ್ಮ ಪುತ್ರ ರಕ್ಷಾ ರಾಮಯ್ಯ(Raksha Rammayiah) ಜೊತೆ ಸೀತಾರಾಂ ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ಸಾಧ್ಯತೆಗಳು ದಟ್ಟವಾಗಿವೆ. ವಿಧಾನಸಭೆಯಿಂದ ಪರಿಷತ್ ನಾಮ ನಿರ್ದೇಶನ ಮಾಡಲು ಎಂ ಆರ್ ಸೀತಾರಾಂ (MR SHITHARAM) ಅವರನ್ನು ಪರಿಗಣಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಸೀತಾರಾಮ್ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಗೊತ್ತಾದ ಕಾಂಗ್ರೆಸ್, ಜೂನ್ 3 ರಂದು ರಕ್ಷಾ ಅವರನ್ನು ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಿಸಿತು. ಎಂಆರ್ ಸೀತಾರಾಮ್ ಇದಕ್ಕೂ ಸಮಾಧಾನಿತರಾದ ಹಾಗೆ ಕಾಣುತ್ತಿಲ್ಲ. ಜೂನ್ 24 ರಂದು ಅರಮನೆ ಮೈದಾನದಲ್ಲಿ ತಮ್ಮ ಬೆಂಬಲಿಗರ ಸಮಾವೇಶವನ್ನು ಆಯೋಜಿಸುವ ಮೂಲಕ ಎಂಆರ್ ಸೀತಾರಾಮ್ ಕಾಂಗ್ರೆಸ್ ಟಕ್ಕರ್ ನೀಡಲು ಪ್ಲಾನ್ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಲಿಜ ಸಮುದಾಯದ ಜನಸಂಖ್ಯೆ ಗಣನೀಯವಾಗಿದ್ದು ಸೀತಾರಾಂ ಬೆಂಬಲಿಗರಾಗಿದ್ದಾರೆ. ರಕ್ಷಾ ರಾಮಯ್ಯಗೆ ಚಿಕ್ಕಬಳ್ಳಾಪುರ ಲೋಕಸಭೆಗೆ ಟಿಕೆಟ್ ಮತ್ತು ಸೀತಾರಾಂ ಅವರನ್ನ ಪರಿಷತ್ ಸದಸ್ಯರನ್ನಾಗಿ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ – ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಾ ರಾಮಯ್ಯ ನೇಮಕ
ಇಂದು ನಡೆದ ಕಾಂಗ್ರೆಸ್ ಪ್ರತಿಭಟನೆಗೆ ರಕ್ಷಾರಾಮಯ್ಯ ಹಾಗೂ ಸೀತಾರಾಂ ಗೈರಾಗಿದ್ದರು. ಈ ಮೂಲಕ ಅಪ್ಪ ಮಗನ ಮುನಿಸು ಸ್ಫೋಟಗೊಂಡಿದೆ. ಜೂನ್ 24 ರ ಸಮಾವೇಶದಲ್ಲಿ ತಮ್ಮ ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ರಾಜಕೀಯ ನಡೆಯ ಬಗ್ಗೆ ಎಂ.ಆರ್ ಸೀತಾರಾಮ್ ಹಾಗೂ ರಕ್ಷಾ ರಾಮಯ್ಯ ನಿರ್ಧರಿಸಲಿದ್ದಾರೆ.ಇದನ್ನೂ ಓದಿ –National Herald Case- ಕಾಂಗ್ರೆಸ್ನಿಂದ ರಾಜಭವನ ಚಲೋ- ಸಿದ್ದರಾಮಯ್ಯ, ಡಿಕೆಶಿ, ಬಿಕೆ ಹರಿಪ್ರಸಾದ್ ಸೇರಿ ಹಲವರು ಪೊಲೀಸ್ ವಶಕ್ಕೆ